Saturday, July 11, 2026
Homeಕರಾವಳಿಮಂಗಳೂರುಸುಳ್ಯ: ಅಪ್ರಾಪ್ತ ಬಾಲಕಿ ಮೇಲೆ ನೆರೆಮನೆಯವನಿಂದಲೇ ನಿರಂತರ ಲೈಂಗಿಕ ದೌರ್ಜನ್ಯ

ಸುಳ್ಯ: ಅಪ್ರಾಪ್ತ ಬಾಲಕಿ ಮೇಲೆ ನೆರೆಮನೆಯವನಿಂದಲೇ ನಿರಂತರ ಲೈಂಗಿಕ ದೌರ್ಜನ್ಯ

- Advertisement -
- Advertisement -

ಸುಳ್ಯ: ಅಪ್ರಾಪ್ತ ಬಾಲಕಿ ಮೇಲೆ ನೆರೆಮನೆಯವನೇ ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಬಾಲಕಿಯ ನೆರೆಮನೆಯ ನಿವಾಸಿಯಾದ ಮಂಜುನಾಥ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ.

ಬಾಲಕಿಯು ಕಳೆದ ಕೆಲವು ದಿನಗಳಿಂದ ಶಾಲೆಗೆ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ, ಮುಖ್ಯೋಪಾಧ್ಯಾಯರು ಆಕೆಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಾಲಕಿಯು ಪಾಪಿ ಕೃತ್ಯವನ್ನು ಶಿಕ್ಷಕರಲ್ಲಿ ಹೇಳಿದ್ದಾಳೆ. ಬಾಲಕಿಯೊಂದಿಗೆ ಸಲುಗೆಯಿಂದಿದ್ದ ಮಂಜುನಾಥ್  ಜೂನ್ 22ರಿಂದ ಜುಲೈ 9ರ ನಡುವಿನ ಅವಧಿಯಲ್ಲಿ ಬಾಲಕಿಯನ್ನು ಹಲವು ಬಾರಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ ಎಂದು ತಿಳಿಸಿದ್ದಾಳೆ.

ಬಾಲಕಿಯ ಪರಿಸ್ಥಿತಿಯನ್ನು ಅರಿತ ಶಾಲಾ ಮುಖ್ಯೋಪಾಧ್ಯಾಯರು ತಕ್ಷಣವೇ ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ನೀಡಿದ್ದಾರೆ. ಸದ್ಯ ಮುಖ್ಯೋಪಾಧ್ಯಾಯರ ದೂರಿನ ಮೇರೆಗೆ ಪೊಲೀಸರು ಆರೋಪಿ ಮಂಜುನಾಥ ವಿರುದ್ಧ ಅಪರಾಧ ಕ್ರಮಾಂಕ 94/2026, ಬಿಎನ್‌ಎಸ್ (BNS) ಕಾಯ್ದೆಯ ಕಲಂ 64(2)(m), 65(1) ಹಾಗೂ ಪೋಕ್ಸೊ ಕಾಯ್ದೆ-2012ರ ಕಲಂ 4, 5(l), 6ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!