- Advertisement -
![]()
- Advertisement -
ಮುಂಬೈ:ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರ ಉದಯೋನ್ಮುಖ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ ಮುಂಬೈ ಸೀನಿಯರ್ ತಂಡದ ಪರ ಕ್ರಿಕೆಟ್ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಆಡಿದ ಅರ್ಜುನ್ 1 ವಿಕೆಟ್ ಕಬಳಿಸಿ ಉತ್ತಮ ಆರಂಭ ಕಂಡುಕೊಂಡಿದ್ದಾರೆ.
ತಂಡಕ್ಕೆ ಗೆಲುವು ಸಿಗಲಿಲ್ಲವಾದರೂ ಅನುಭವಿ ಧವಳ್ ಕುಲಕರ್ಣಿ ಜತೆಗೆ ಹೊಸ ಚೆಂಡು ಹಂಚಿಕೊಂಡ ಅರ್ಜುನ್, ತಾನೆಸೆದ 2ನೇ ಓವರ್‌ನಲ್ಲೇ ಅಂದರೆ 10ನೇ ಎಸೆತದಲ್ಲೇ ವಿಕೆಟ್ ಕಬಳಿಸಿದರು.
- Advertisement -


