Thursday, June 4, 2026
Homeಕರಾವಳಿಕಾಸರಗೋಡುಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಕೇರಳ ರಾಜ್ಯಪಾಲ: ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ...

ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಕೇರಳ ರಾಜ್ಯಪಾಲ: ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ ಆರಿಫ್ ಮೊಹಮ್ಮದ್ ಖಾನ್

- Advertisement -
- Advertisement -

ಕೇರಳ : ಸಾಂಪ್ರದಾಯಿಕವಾಗಿ ಮಣಿಮಾಲೆ ಧರಿಸಿ, ಇರುಮುಡಿ ಹೊತ್ತ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಿನ್ನೆ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿ, ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ.

ಐದು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಆಗಮಿಸಿದ ಅವರು, ಸಾಂಪ್ರದಾಯಿಕ ಮಣಿಮಾಲೆ ಧರಿಸಿದ್ದರು. ಎಲ್ಲಾ ಭಕ್ತರಂತೆ ಇರುಮುಡಿ ಕಟ್ಟನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಹೋಗಿ ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು.

ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎನ್.ವಾಸು ಮತ್ತು ಟಿಡಿಬಿ ಆಯುಕ್ತ ಬಿ.ಎಸ್. ತಿರುಮೇನಿ ಅವರಿಗೆ ವಾಲಿಯಾ ನಾದಪಂಥಾಲ್ ನಲ್ಲಿ ಸ್ವಾಗತ ನೀಡಿದರು.

ನಂತರ, ಅವರು ಅಯ್ಯಪ್ಪ ದೇವಾಲಯ ಮತ್ತು ಇತರ ಸಂಬಂಧಿತ ದೇವಾಲಯಗಳ ೧೮ ಪವಿತ್ರ ಮೆಟ್ಟಿಲುಗಳನ್ನು ಏರಿದರು.  ಖಾನ್ ಅವರು ಇಂದು ಬೆಳಿಗ್ಗೆ ಮತ್ತೊಮ್ಮೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ರಾಜಭವನಕ್ಕೆ ಮರಳಿದ್ದಾರೆ.

ಸನ್ನಿಧಾನಂ ನಿಂದ ಹೊರಡುವ ಮುನ್ನ ರಾಜ್ಯಪಾಲರು ಮಲಿಕಾಪುರಂ ದೇವಿ ದೇವಾಲಯದ ಆವರಣದಲ್ಲಿ ಶ್ರೀಗಂಧದ ಸಸಿಯನ್ನು ನೆಟ್ಟಿದ್ದಾರೆ ಮತ್ತು ಪುಣ್ಯಂ ಪೂಂಗವಾನಂ ಯೋಜನೆಗೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

- Advertisement -

Latest News

error: Content is protected !!