Friday, April 26, 2024
Homeತಾಜಾ ಸುದ್ದಿಮಕ್ಕಳಗಾದ ಕೊರಗು: ರಾಜ್ಯದ ಹಿರಿಯ ಮಹಿಳಾ ಕ್ರೀಡಾಪಟು ಆತ್ಮಹತ್ಯೆಗೆ ಶರಣು

ಮಕ್ಕಳಗಾದ ಕೊರಗು: ರಾಜ್ಯದ ಹಿರಿಯ ಮಹಿಳಾ ಕ್ರೀಡಾಪಟು ಆತ್ಮಹತ್ಯೆಗೆ ಶರಣು

spot_img
- Advertisement -
- Advertisement -

ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಏಕಲವ್ಯ ಪ್ರಶಸ್ತಿ ಪರುಸ್ಕೃತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಜಯನಗರದ ಮಾರೇನಹಳ್ಳಿ ನಡೆದಿದೆ.

ರಾಷ್ಟ್ರಮಟ್ಟದ ಈಜುಪಟು, 2019ರಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಜಿ.ಬಿ. ಶಿಲ್ಪಾ (41) ಮೃತ ಮಹಿಳೆ. ಶಿಲ್ಪಾ ಮತ್ತು ನೀಲ ಕೃಷ್ಣ ಪ್ರಸಾದ್ ದಂಪತಿ ಅನ್ಯೋನ್ಯವಾಗಿಯೇ ಇದ್ದರು. ಹಲವು ವರ್ಷಗಳಿಂದ ಶಿಲ್ಪ ದಂಪತಿಗೆ ಮಕ್ಕಳಾಗಿರಲಿಲ್ಲ. ನಾಲ್ಕು ತಿಂಗಳ ಹಿಂದಷ್ಟೆ ಆಕೆಯ ತಾಯಿ ಸಾವಿಗೀಡಾಗಿದ್ದರು. ಶಾಲೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಿಲ್ಪಾ ಲಾಕ್ ಡೌನ್‌ ನಿಂದಾಗಿ ಕೆಲಸವನ್ನೂ ಕಳೆದುಕೊಂಡಿದ್ರು. ಇ ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.

ಡೆತ್ ನೋಟ್:
ಆತ್ಮಹತ್ಯೆಗೂ ಮುನ್ನ ಶಿಲ್ಪಾ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ಅಸಹಾಯಕ ಬದುಕಿನ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ರಂಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದರೂ ಒಂದು ಶಾಲೆಯಲ್ಲಿ ಶಿಕ್ಷಕಿ ಕೆಲಸ ಪಡೆಯಲಾಗದ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ಒಂದು ವರ್ಷದಿಂದ ಕೆಲಸ ವಿಲ್ಲದೇ ಕಂಗಾಲಾಗಿದ್ದ ಶಿಲ್ಪಾ ಖಿನ್ನತೆಗೆ ಒಳಗಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ತಾಯಿ ತೀರಿಕೊಂಡಿದ್ದರು. ಬದುಕಿನ ಪಯಣವನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದು ಭಾವುಕ ಪದಗಳಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸದ ನಿಮಿತ್ತ ಪತಿ ಹೊರಗೆ ಹೋದ ಸಮಯದಲ್ಲಿ ಶಿಲ್ಪ ಅವರು ನೇಣಿಗೆ ಶರಣಾಗಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!