Thursday, June 4, 2026
HomeUncategorizedರಾಜ್ಯದ ಇಂದಿನ ಕೋವಿಡ್ ಅಪಡೇಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ...

ರಾಜ್ಯದ ಇಂದಿನ ಕೋವಿಡ್ ಅಪಡೇಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ…

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೊನಾ ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಬರೋಬ್ಬರಿ 5,619 ಪ್ರಕರಣಗಳು ಇಂದು ವರದಿಯಾಗಿವೆ. ಹಾಗೇ ಇಂದು ಕೊರೊನಾಗೆ 100 ಜನ ರಾಜ್ಯದಲ್ಲಿ ಬಲಿಯಾಗಿದ್ದಾರೆ. ಇನ್ನು ಇಂದಿನ 5619 ಪ್ರಕರಣಗಳ ಸೇರ್ಪಡೆಯೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿಕೆಯಾಗಿದೆ.

ಇನ್ನು ಸಂತೋಷದ ವಿಚಾರ ಅಂದ್ರೆ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಸಾಗುತ್ತಿದೆ. ಇಂದು 5,407 ಜನ ಗುಣಮುಖರಾಗಿದ್ದಾರೆ.ಸದ್ಯ ರಾಜ್ಯದಲ್ಲಿ 73,958 ಸಕ್ರಿಯ ಪ್ರಕರಣಗಳಿದ್ದು, 74,679 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ ಒಟ್ಟು 2,804 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ರಾಜ್ಯ ರಾಜಧಾನಿಯಲ್ಲಿಂದು 1,848 ಪ್ರಕರಣಗಳು ವರದಿಯಾಗಿವೆ. 29 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಸದ್ಯ ಸೋಂಕಿತರ ಸಂಖ್ಯೆ 64,881ಕ್ಕೆ ಏರಿಕೆಯಾಗಿದ್ದು, 30,960 ಜನ ಗುಣಮುಖರಾಗಿದ್ದಾರೆ. ಸದ್ಯ 32,757 ಪಾಸಿಟಿವ್ ಪ್ರಕರಣಗಳಿವೆ. ಇಂದು 3083 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 1,163 ಕೋವಿಡ್ ಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!