Saturday, October 17, 2026
Homeಕರಾವಳಿಚಾರ್ಮಾಡಿ ಘಾಟಿಯಲ್ಲಿ ಬೃಹದಾಕಾರದ ಬಂಡೆಗಳ ಕುಸಿತ- ರಸ್ತೆ ಸಂಚಾರಕ್ಕೆ ಅಡ್ಡಿ

ಚಾರ್ಮಾಡಿ ಘಾಟಿಯಲ್ಲಿ ಬೃಹದಾಕಾರದ ಬಂಡೆಗಳ ಕುಸಿತ- ರಸ್ತೆ ಸಂಚಾರಕ್ಕೆ ಅಡ್ಡಿ

- Advertisement -
- Advertisement -

ಬೆಳ್ತಂಗಡಿ: ಮಂಗಳೂರು–ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟ್ 2 ಮತ್ತು 3 ನೇ ತಿರುವಿನ ಮಧ್ಯೆ ಭಾರಿ ಗಾತ್ರದ ಬಂಡೆಗಳು ಕುಸಿದ ಘಟನೆ ಬುಧವಾರ ಸಂಜೆ ನಡೆದಿದೆ.ಸಂಜೆ ಸುಮಾರು 6.20ರ ಹೊತ್ತಿಗೆ ಬೃಹದಾಕಾರದ ಎರಡು ಬಂಡೆಗಳು ಕುಸಿದಿದ್ದು, ಸದ್ಯ ಒಂದು ವಾಹನ ಸಾಗುವಷ್ಟು ತೆರವು ಮಾಡಲಾಗಿದೆ.

ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದ್ದು. ಸಂಜೆ 7ರ ಬಳಿಕ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ನಿರ್ಭಂದ ಇರುವುದರಿಂದ ರಾತ್ರಿ ತೆರವು ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!