Monday, April 29, 2024
Homeತಾಜಾ ಸುದ್ದಿಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಇಂಡಿಯಾ ಬ್ಲಾಕ್ ಪ್ರತಿಭಟನೆ; ದೆಹಲಿ ಪೊಲೀಸರಿಂದ ಬಿಗಿ ಭದ್ರತೆ

ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಇಂಡಿಯಾ ಬ್ಲಾಕ್ ಪ್ರತಿಭಟನೆ; ದೆಹಲಿ ಪೊಲೀಸರಿಂದ ಬಿಗಿ ಭದ್ರತೆ

spot_img
- Advertisement -
- Advertisement -

ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣಾ ಸಂದರ್ಭದಲ್ಲಿ ಬಂಧಿಸಿರುವುದನ್ನು ಖಂಡಿಸಿ, ವಿರೋಧ ಪಕ್ಷಗಳ ‘ಇಂಡಿಯಾ ಬ್ಲಾಕ್’ ನಾಯಕರು ಇಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಹೋರಾಟವನ್ನು ಹತ್ತಿಕ್ಕಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿರುವ ಪೊಲೀಸರು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ aಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 22 ರಂದು ಬಂಧಿಸಲಾಯಿತು. ಏಪ್ರಿಲ್ 1 ರವರೆಗೆ ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಅವರನ್ನು ನೀಡಲಾಗಿದ್ದು, ಪ್ರತಿಪಕ್ಷಗಳು ನಾಯಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಗೆ ಸಾಗುವ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ರಾಜಧಾನಿ ನಗರವು ಈ ಭದ್ರತಾ ಸಿಬ್ಬಂದಿಯನ್ನು ಕೇಂದ್ರ ದೆಹಲಿಯ ಹಲವಾರು ಸ್ಥಳಗಳಲ್ಲಿ, ಡಿಡಿಯು ಮಾರ್ಗದಲ್ಲಿ ಮತ್ತು ಐಟಿಒ ಪ್ರದೇಶದ ಸುತ್ತಲೂ ನಿಯೋಜಿಸಿದೆ ಪಡೆಗಳನ್ನು ನಿಯೋಜಿಸಲಾಗಿದೆ.

ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ನಿಗದಿತ ಪ್ರತಿಭಟನೆ ಬಗ್ಗೆ ಪ್ರತಿಪಕ್ಷ ಮುಖಂಡರಿಗೆ ಎಎಪಿ ಮಾಹಿತಿ ನೀಡಿದೆ. ಪ್ರತಿಭಟನೆಯು ಕಳೆದೆರಡು ದಿನಗಳಿಂದ ಕಾವು ಪಡೆದ ಚುನಾವಣಾ ಬಾಂಡ್‌ಗಳ ಸಮಸ್ಯೆಯನ್ನು ಸಹ ಒಳಗೊಂಡಿದೆ. ಡಿಡಿಯು ಮಾರ್ಗದಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇಂದ್ರ ಕಚೇರಿ ಮುಂದೆ ಹೋರಾಟ ನಡೆಯಲಿದೆ.

ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ “ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ಡಿಡಿಯು ಮಾರ್ಗದ ಕಡೆಗೆ ಹೋಗುವುದನ್ನು ತಡೆಯುತ್ತಾರೆ” ಎಂದು ತಿಳಿಸಿದ್ದಾರೆ. ಐಟಿಒ ಮತ್ತು ಮಿಂಟೊ ರಸ್ತೆಯಿಂದ ಬಿಜೆಪಿ ಪ್ರಧಾನ ಕಚೇರಿಗೆ ಹೋಗುವ ರಸ್ತೆ ತೆರೆದಿದೆ. ಆದರೆ, ಅಗತ್ಯವಿದ್ದರೆ ಮುಚ್ಚಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 31 ರಂದು, ಇಂಡಿಯಾ ಬ್ಲಾಕ್ ದೆಹಲಿಯ ರಾಮಲೀಲಾ ಮೈದಾನದಲ್ಲಿ ಮೆಗಾ ರ್ಯಾಲಿಯನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

- Advertisement -
spot_img

Latest News

error: Content is protected !!