Sunday, April 28, 2024
Homeಕರಾವಳಿಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹ ಧನ

ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹ ಧನ

spot_img
- Advertisement -
- Advertisement -

ಮಂಗಳೂರು: ರಾಜ್ಯ ಸರಕಾರವು ರಾಜ್ಯದಲ್ಲಿ ನಕ್ಸಲರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಇದರ ಬೆನ್ನಲ್ಲೇ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೂ ಮುಂದಾಗಿದೆ.

ನಕ್ಸಲರ ಶರಣಾಗತಿ, ಪುನರ್ವಸತಿಗೆ ಸಂಬಂಧಿಸಿದ ಈ ಹಿಂದಿನ ಯೋಜನೆಗಳಿಗೆ ಹೊಸ ರೂಪ ನೀಡಲಾಗಿದ್ದು ಶರಣಾಗುವ ಓರ್ವ ನಕ್ಸಲನಿಗೆ 7.50 ಲ.ರೂ. ವರೆಗೆ ನಗದು ಪರಿಹಾರ/ಪ್ರೋತ್ಸಾಹಧನ ನೀಡಲಾಗುವುದು. ಹೆಚ್ಚು ಪರಿಣಾಮಕಾರಿ ಮತ್ತು ಪ್ರಯೋಜನಕಾರಿ ಎನಿಸುವಂತಹ ಪ್ಯಾಕೇಜ್‌ ನೀಡಲೂ ನಿರ್ಧರಿಸಲಾಗಿದೆ. ಶರಣಾಗತರಾಗುವವರಿಗೆ ನಗದು ಜತೆಗೆ ಕೌಶಲ ತರಬೇತಿ, ಇತರ ಪ್ರೋತ್ಸಾಹ ಧನ, ಪ್ರಕರಣ ವಾಪಸು ಹಾಗೂ ಪುನರ್ವಸತಿ ಮತ್ತಿತರ ಯೋಜನೆಗಳನ್ನು ಹೊಂದಲಾಗಿದೆ.

ಶರಣಾಗುವವರು ತಮ್ಮ ಶಸ್ತ್ರಾಸ್ತ ಅಥವಾ ಉಪಕರಣಗಳನ್ನು ಒಪ್ಪಿಸಿದರೆ ಪ್ರತೀ ಆಯುಧ ಅಥವಾ ಉಪಕರಣಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಉದಾಹರಣೆಗೆ ಎ.ಕೆ.47/56/74 ರೈಫ‌ಲ್‌ಗೆ (ಒಂದು ಆಯುಧಕ್ಕೆ) 30,000 ರೂ, ಯುಎಂಜಿ/ಜಿಪಿಎಂ/ಆರ್‌ಪಿಜಿ/ ಸ್ನೆ„ಪರ್‌ ರೈಫ‌ಲ್‌ಗೆ (ಒಂದು ಆಯುಧಕ್ಕೆ) 50,000 ರೂ, ಪಿಸ್ತೂಲ್‌/ರಿವಾಲ್ವರ್‌ ಒಂದು ಆಯುಧಕ್ಕೆ 10,000 ರೂ., ಎಸ್‌ಎಎಂ ಮಿಸೈಲ್‌ (ಒಂದು ಆಯುಧಕ್ಕೆ) 40,000 ರೂ. ನೀಡಲಾಗುತ್ತದೆ.

ಹಾಗೆಯೇ ಶರಣಾಗತರಾಗುವ ನಕ್ಸಲರು ಮಾಹಿತಿ ನೀಡಿದರೆ ಹೆಚ್ಚುವರಿ ಪ್ರೋತ್ಸಾಹಧನ ಸಿಗಲಿದೆ. ತಮ್ಮ ದಳದ ಇತರ ಭೂಗದ ಸದಸ್ಯರನ್ನು ವಶಕ್ಕೆ ಪಡೆಯಲು ಅಥವಾ ಶರಣಾಗತಿಗೆ ಕಾರಣವಾಗುವ ಮಾಹಿತಿಗೆ, ಶಸ್ತ್ರಾಸ್ತ್ರಗಳನ್ನು ಬಚ್ಚಿಡುವ ಡಂಪ್‌ ಗಳನ್ನು ಪತ್ತೆ ಮಾಡಲು ದಾರಿ ತೋರಿಸುವ ಮಾಹಿತಿಗೆ ಹೆಚ್ಚುವರಿ ಪ್ರೋತ್ಸಾಹಧನ ನಿಗದಿ ಆಗಿದೆ. ಅಲ್ಲದೆ ಯಾವುದೇ ವೃತ್ತಿಪರ ಅಥವಾ ಕೌಶಲ ತರಬೇತಿಗಳಿಗೆ ನೋಂದಾಯಿಸಿಕೊಂಡರೆ ಎರಡು ವರ್ಷಗಳವರೆಗೆ ಪ್ರತೀ ತಿಂಗಳು 5,000 ರೂ. ಪ್ರೋತ್ಸಾಹಧನ, ಮಾತ್ರವಲ್ಲದೆ ಔಪಚಾರಿಕ ಶಿಕ್ಷಣಕ್ಕೆ ಮೂರು ವರ್ಷಗಳ ಅವಧಿಗೆ ಪ್ರೋತ್ಸಾಹ ಧನ ಸಿಗಲಿದೆ.

ಪ್ರಕರಣಗಳನ್ನು ಹಿಂಪಡೆಯಲು ಪರಿಗಣನೆ: ಶರಣಾಗತರಾದವರು ಮಾಡಿದ ಘೋರ ಅಪರಾಧಗಳು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತದೆ. ರಾಜ್ಯ ಸರಕಾರ ಸರಿಯಾದ ಕಾರ್ಯವಿಧಾನಗಳ ಪಾಲನೆಯ ಅನಂತರ ಶರಣಾದವರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹಿಂಪಡೆಯಲು ಪರಿಗಣಿಸಬಹುದು. ಶರಣಾದ ನಕ್ಸಲರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲು ಸರಕಾರವೇ ವಕೀಲರನ್ನೂ ನೇಮಿಸಬಹುದು. ಅಲ್ಲದೆ ಶರಣಾದವರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆಗಳಿಗಾಗಿ ರಾಜ್ಯ ಸರಕಾರ ತ್ವರಿತಗತಿ ನ್ಯಾಯಾಲಯಗಳನ್ನೂ ತೆರೆಯಬಹುದು ಎಂಬುದನ್ನು ಉನ್ನತೀಕರಿಸಿದ ಶರಣಾಗತಿ ಯೋಜನೆಯಲ್ಲಿ ಉಲ್ಲೇಖೀಸಲಾಗಿದೆ.

14 ಮಂದಿ ಶರಣಾಗತಿ: ಈ ಹಿಂದೆ ಮಹಿಳೆಯರೂ ಸೇರಿದಂತೆ ಭೂಗತರಾಗಿದ್ದ 14 ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ಅವರಿಗೆ ಪ್ರೋತ್ಸಾಹಧನ ಸಹಿತ ಪುನರ್ವಸತಿ ಮಾಡಲಾಗಿದೆ. ಇದೀಗ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಇತರರನ್ನು ಕೂಡ ಸೆಳೆದು ಅವರನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ತರುವುದಕ್ಕಾಗಿ ಯೋಜನೆ ಉನ್ನತೀಕರಿಸಲಾಗಿದ್ದು ಶರಣಾಗುವವರಿಗೆ ಹೆಚ್ಚು ಸೌಲಭ್ಯಗಳು ಸಿಗಲಿವೆ.

- Advertisement -
spot_img

Latest News

error: Content is protected !!