Sunday, May 19, 2024
Homeಇತರಬೆಂಗಳೂರಿನಲ್ಲಿ 222 ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಗಳ ಸಂಚಾರ ರದ್ದು

ಬೆಂಗಳೂರಿನಲ್ಲಿ 222 ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಗಳ ಸಂಚಾರ ರದ್ದು

spot_img
- Advertisement -
- Advertisement -

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಏರುತ್ತಿರುವ ಕೊರೊನಾ ಆರ್ಭಟ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಅದರಲ್ಲೂ ಬಿಎಂಟಿಸಿ ಬಸ್ ನಲ್ಲಿ ಓಡಾಡಿದರೆ ಕೊರೊನಾ ಗ್ಯಾರಂಟಿ ಅನ್ನೋ ಸ್ಥಿತಿ ಸದ್ಯಕ್ಕಿದೆ. ಹಾಗಾಗಿ ಬಿಎಂಟಿಸಿ ಹತ್ತುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಇದು ಬಿಎಂಟಿಸಿಗೂ ಬಹು ದೊಡ್ಡ ಹೊಡೆತ ನೀಡಿದೆ. ಕೆಲವು ರಸ್ತೆಗಳಲ್ಲಿ ಪ್ರತಿದಿನ ಖಾಲಿ ಬಸ್ ಗಳನ್ನು ಓಡಾಡಿಸುವಂತಾಗಿದೆ. ಹಾಗಾಗಿ ಪಶ್ಚಿಮ ಹಾಗೂ ಈಶಾನ್ಯ ಮಾರ್ಗಗಳಲ್ಲಿ ಬಸ್ ಸಂಚಾರ ರದ್ದಾಗಿದೆ. ದಿನಕ್ಕೆ 4 ರಿಂದ 5 ಟ್ರಿಪ್ ಹೋಗುತ್ತಿದ್ದ ಮಾರ್ಗಗಳಲ್ಲಿ  ಈಗ ಒಂದು ಟ್ರಿಪ್ ಸಂಚರಿಸುತ್ತಿದೆ ಬಿಎಂಟಿಸಿ. ಬಿಎಂಟಿಸಿ ಬಸ್ ನಲ್ಲಿ ಎಲ್ಲಾ ಏರಿಯಾಗಳ ಜನ ಓಡಾಡುತ್ತಾರೆ. ಹೀಗಾಗಿ ಕೊರೊನಾ ಯಾರಿಗಿದೆ ಯಾರಿಗಿಲ್ಲ ಅಂತಾ ಹೇಳೋದು ಹೇಗೆ. ಸುಮ್ಮನೆ ರಿಸ್ಕ್ ಯಾಕೆ ಅಂತಾ ಜನ ಬಿಎಂಟಿಸಿ ಸಹವಾಸವೇ ಬೇಡ ಅಂತಿದ್ದಾರೆ. ಇನ್ನು ಇತ್ತೀಚೆಗೆ ಬಿಎಂಟಿಸಿ ಡ್ರೈವರ್ ಗೆ ಸೋಂಕು ಕಾಣಿಸಿಕೊಂಡ್ದು ಪ್ರಯಾಣಿಕರ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ.

ಇನ್ನು ಪ್ರಯಾಣಿಕರಿಲ್ಲದೆ ಬಸ್ ಓಡಿಸೋದು ಮೊದಲೇ ನಷ್ಟದಲ್ಲಿರುವ ಬಿಎಂಟಿಸಿಗೆ ಮತ್ತೊಂದು ತಲೆನೋವು. ಹಾಗಾಗಿ 4 ರಿಂದ 5 ಟ್ರಿಪ್ ಗಳಲ್ಲಿ ಕೆಲವು ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಸಂಚಾರವನ್ನು ಒಂದು ಟ್ರಿಪ್ ಗೆ ಇಳಿಸಿದ್ದಾರೆ.

- Advertisement -
spot_img

Latest News

error: Content is protected !!