Monday, March 17, 2025
HomeUncategorizedಉಪ್ಪಿನಂಗಡಿ: ಶ್ರೀಮಂತನೆಂದು ನಂಬಿಸಿ ಹಿಂದೂ ಯುವತಿಯನ್ನು ನಂಬಿಸಿ ಮದುವೆಯಾದ ಮುಸ್ಲಿಂ ಯುವಕ; ಬಸ್ ಟಿಕೆಟ್ ಗೂ...

ಉಪ್ಪಿನಂಗಡಿ: ಶ್ರೀಮಂತನೆಂದು ನಂಬಿಸಿ ಹಿಂದೂ ಯುವತಿಯನ್ನು ನಂಬಿಸಿ ಮದುವೆಯಾದ ಮುಸ್ಲಿಂ ಯುವಕ; ಬಸ್ ಟಿಕೆಟ್ ಗೂ ಹಣವಿಲ್ಲದೇ ಪತ್ನಿಯಿಂದ ಏಟು ತಿಂದ ವಂಚಕ

spot_img
- Advertisement -
- Advertisement -

ಉಪ್ಪಿನಂಗಡಿ: ಶ್ರೀಮಂತನೆಂದು ನಂಬಿಸಿ ಹಿಂದೂ ಯುವತಿಯನ್ನು ನಂಬಿಸಿ ಮದುವೆಯಾದ ಮುಸ್ಲಿಂ ಯುವಕನೊಬ್ಬ ಕೊನೆಗೆ ಬಸ್ ಟಿಕೆಟ್ ಗೂ ಹಣವಿಲ್ಲದೇ ಪತ್ನಿಯಿಂದ ಏಟು ತಿಂದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಸಮಿರುಲ್ಲಾ ಎಂಬಾತ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಪವಿತ್ರ ಎಂಬಾಕೆಯನ್ನು ತಾನು ಶ್ರೀಮಂತ ನನ್ನ ಬಳಿ ಸಿಕ್ಕಾಪಟ್ಟೆ ಹಣವಿದೆ ಎಂದು ನಂಬಿಸಿ ಮದುವೆಯಾಗಿದ್ದ. ಆತನ ಮಾತಿಗೆ ಮರುಳಾದ ಪವಿತ್ರ ಮನೆ ಬಿಟ್ಟು ಬೆಂಗಳೂರಿಗೆ ಆತನನ್ನು ಮದುವೆಯಾಗಿದ್ದಳು. ಒಂದು ಮಗುವಿನ ತಾಯಿಯೂ ಆಗಿದ್ದಳು.

ಕಳೆದೆರಡು ದಿನಗಳ ಹಿಂದೆ ಸಮೀರುಲ್ಲಾ ಉಡುಪಿಯತ್ತ ಹೋಗೋಣವೆಂದು ಪತ್ನಿ ಪವಿತ್ರಾಳನ್ನು ಬುರ್ಖಾ ತೊಡಿಸಿ ಬಸ್ಸಿನಲ್ಲಿ ಹೊರಟಿದ್ದ. ಈ ವೇಳೆ ಸಮಿರುಲ್ಲಾನಲ್ಲಿ ಬಸ್ಸಿನ ಟಿಕೆಟಿಗೂ ಹಣವಿರಲಿಲ್ಲ. ಹೀಗಾಗಿ ನಿರ್ವಾಹಕ ಉಪ್ಪಿನಂಗಡಿಯಲ್ಲಿ ಸಮಿರುಲ್ಲಾನನ್ನು ಇಳಿಸಿದ್ದಾನೆ. ಪತಿಯೊಂದಿಗೆ ಬಸ್ಸಿನಿಂದ ಇಳಿದ ಪವಿತ್ರಾಳಿಗೆ ಅವಮಾನವಾದಂತಾಗಿ ಹಣವಿಲ್ಲದ ಮೇಲೆ ಯಾಕೆ ಬರ್ಬೇಕಿತ್ತು ಎಂದು ಗರಂ ಆದ ಪವಿತ್ರಾ ಗಂಡನ ವರ್ತನೆಯಿಂದ ಆಕ್ರೋಶಗೊಂಡು ಬೀದಿಯಲ್ಲೇ ಆತನಿಗೆ ಹೊಡೆದಿದ್ದಾಳೆ.

ಇವರಿಬ್ಬರ ಜಗಳ ನೋಡಿ ಜನ ಸೇರಿದ್ದಾರೆ. ವಿಚಾರಿಸಿದಾಗ ಇಡೀ ಸ್ಟೋರಿ ಬಯಲಾಗಿದೆ.  ಸಮೀರ್  ತಾನು ಮುಸ್ಲಿಂ, ತನ್ನ ಪತ್ನಿ ಹಿಂದೂ ಎಂದೂ ಪರಿಚಯಿಸಿದ್ದಾನೆ. ಅಲ್ಲದೆ ಪತ್ನಿ ಪವಿತ್ರಳು ಹೆಚ್ಚಾಗಿ ತನ್ನ ಮೇಲೆ ದಾಳಿ ಮಾಡುತ್ತಿದ್ದಾಳೆ ಎಂದು ಗೊತ್ತಾದಾಗ ಇದು ಮುಸ್ಲಿಮರು ಹೆಚ್ಚಿರುವ ಪ್ರದೇಶ ನೀನು ನನಗೇನು ಮಾಡಲು ಸಾಧ್ಯವಿಲ್ಲ ಎಂದು ಅವಾಜ್ ಹಾಕಿದ್ದನು. ಅಷ್ಟರಲ್ಲಿ ಪೊಲೀಸರು ಬಂದು ಇವರನ್ನು ವಶಕ್ಕೆ ಪಡೆದು ಎಲ್ಲವನ್ನು ವಿಚಾರಿಸಿದ ಬಳಿಕ ತಾವೇ ಟಿಕೇಟಿಗೆ ಹಣ ನೀಡಿ ಮರಳಿ ಬೆಂಗಳೂರಿಗೆ ಕಳುಹಿಸಿದ್ದು ಪ್ರಕರಣ ಅಲ್ಲಿಗೆ ಸುಖಾಂತ್ಯವಾಗಿದೆ.

- Advertisement -
spot_img

Latest News

error: Content is protected !!