Monday, June 29, 2026
Homeಕರಾವಳಿಸಿಇಟಿ ಇಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದ ಧರ್ಮಸ್ಥಳದ ಸೃಜನ್

ಸಿಇಟಿ ಇಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದ ಧರ್ಮಸ್ಥಳದ ಸೃಜನ್

- Advertisement -
- Advertisement -

ಧರ್ಮಸ್ಥಳ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿರುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಫಲಿತಾಂಶದಲ್ಲಿ ಧರ್ಮಸ್ಥಳ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ಶ್ರೀ ಸೃಜನ್ ಅವರು ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ (2nd) ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಸಾಧಕ ವಿದ್ಯಾರ್ಥಿ ಸೃಜನ್ ಅವರು ಧರ್ಮಸ್ಥಳ ಗ್ರಾಮದ ಕನ್ಯಾಡಿಯ “ದ್ವಾರಕಾ” ನಿವಾಸದ ಕೀರ್ತಿಶೇಷ ಶ್ರೀ ಬಿ. ಸುಬ್ರಹ್ಮಣ್ಯ ರಾವ್ ಮತ್ತು ಶ್ರೀಮತಿ ಬಿ. ಭುವನೇಶ್ವರಿ ದಂಪತಿಯ ಮೊಮ್ಮಗ ಹಾಗೂ ಶ್ರೀ ಸುರೇಶ್ ರಾವ್ ಮತ್ತು ಶ್ರೀಮತಿ ಪೃಥ್ವಿ ದಂಪತಿಯ ಪುತ್ರರಾಗಿದ್ದಾರೆ.

ರಾಜ್ಯದ ಅತ್ಯಂತ ಕಠಿಣ ಹಾಗೂ ಸವಾಲಿನ ಪರೀಕ್ಷೆಗಳಲ್ಲಿ ಒಂದಾದ ಸಿಇಟಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ನಡುವೆ ಪೈಪೋಟಿ ನಡೆಸಿ ಸೃಜನ್ ಈ ಸಾಧನೆ ಗಿಟ್ಟಿಸಿಕೊಂಡಿದ್ದಾರೆ.

- Advertisement -

Latest News

error: Content is protected !!