- Advertisement -
![]()
- Advertisement -
ಮುಂಬೈ: ಕಾಗದದ ಬದಲಿಗೆ ಪಾಲಿಮರ್(ಪ್ಲಾಸ್ಟಿಕ್) ನೋಟುಗಳನ್ನು ಪರಿಚಯಿಸುವ ಯೋಚನೆಯನ್ನು ಆರ್‌ಬಿಐ ಕೈಗೆತ್ತಿಕೊಂಡಿದೆ.
ಆದರೆ ಈ ಪ್ರಸ್ತಾವವು ಇನ್ನೂ ಶೈಶವಾವಸ್ಥೆಯಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನ ಗೌವರ್ನರ್ ಸಂಜಯ್ ಮಲ್ಲೋತ್ರಾ ಸ್ಪಷ್ಟಡಿಸಿದ್ದಾರೆ.
ಆರ್‌ಬಿಐನ ವಿತ್ತ ನೀತಿ ಪರಾಮರ್ಶೆ ಸಮಿತಿ ಸಭೆ(ಎಂಪಿಸಿ) ಕೈಗೊಂಡ ನಿರ್ಧಾರಗಳ ಬಗ್ಗೆ ಉತ್ತರಿಸಿ, ಇನ್ನೂ ಕೂಡ ಯಾವುದೇ ನಿರ್ಧಾರವನ್ನು ಪಾಲಿಮರ್ ನೋಟುಗಳ ಬಗ್ಗೆ ಕೈಗೊಂಡಿಲ್ಲ. ಈ ನೋಟುಗಳ ಬಳಕೆಯ ಕಾರ್ಯಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಪಾಲಿಮರ್ ನೋಟುಗಳಿಗೆ ಸಂಬಂಧಿಸಿದ ಪ್ರಸ್ತಾವನೆಯು ಪರಿಗಣನೆಯಲ್ಲಿದೆ ಎಂದು ತಿಳಿಸಿದರು.
- Advertisement -


