- Advertisement -
![]()
- Advertisement -
ಬೆಂಗಳೂರು: ರಾಮಲಿಂಗಾರೆಡ್ಡಿ ನನ್ನ ಫ್ರೆಂಡ್, ಸಮಸ್ಯೆ ಪರಿಹಾರ ಆಗಿದೆ ಎಂದು ವಿಧಾನಸೌಧದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಮಲಿಂಗಾ ರೆಡ್ಡಿ ರಾಜೀನಾಮೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಸಮಸ್ಯೆ ಪರಿಹಾರವಾಗಿದೆ. ಸ್ಟೋರಿಗಳಿಗೋಸ್ಕರ ಸ್ಟೋರಿ ಮಾಡಬೇಡಿ. ನೀವೇನೇ ಮಾಡಿದರೂ ಅದು ಹುಸಿ ಆಗುತ್ತವೆ ಎಂದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಮೋದಿ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಮೋದಿ ನನಗೆ ಶುಭ ಹಾರೈಕೆ ಮಾಡಿದ್ದಾರೆ . ಅದಕ್ಕೆ ಧನ್ಯವಾದ ಹೇಳುತ್ತೇನೆ.ನಾವು ರಾಜಕೀಯ ಮಾಡುವುದು ಬೇಡ, ಅವರೂ ರಾಜಕೀಯ ಮಾಡುವುದು ಬೇಡ. ನಮ್ಮ ಸರ್ಕಾರ ಇರುವುದು ಜನರ ಅಭಿವೃದ್ಧಿಗೆ. ರಾಜ್ಯದ ವಿಚಾರಕ್ಕೆ ಮೋದಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
- Advertisement -


