Saturday, June 6, 2026
Homeಕರಾವಳಿಮಂಗಳೂರು ಬೆಂಗಳೂರಿನಲ್ಲಿದ್ದ ಸುಳ್ಯದ ಯುವಕ ನಾಪತ್ತೆ

 ಬೆಂಗಳೂರಿನಲ್ಲಿದ್ದ ಸುಳ್ಯದ ಯುವಕ ನಾಪತ್ತೆ

- Advertisement -
- Advertisement -

ಸುಳ್ಯ; ಬೆಂಗಳೂರಿನಲ್ಲಿದ್ದ ಸುಳ್ಯದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಸುಳ್ಯದ ಕುರುಂಜಿಗುಡ್ಡೆ ಸುಂದರ ನಾಯ್ಕ ಅವರ ಪುತ್ರ ಗಣೇಶ (40) ನಾಪತ್ತೆಯಾದ ಯುವಕ.

ಗಣೇಶ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ರಂಜಿತ್‌ ಅವರೊಂದಿಗೆ ಎಲೆಕ್ಟ್ರಿಷಿಯನ್‌ ಕೆಲಸ ಮಾಡಿಕೊಂಡಿದ್ದರು. 2024ರ ಡಿ. 28ರಂದು ರಜೆ ಪಡೆದು ಕುರುಂಜಿಗುಡ್ಡೆಯ ತನ್ನ ಮನೆಗೆ ಬಂದಿದ್ದರು. ಬಳಿಕ  ರಜೆ ಮುಗಿಸಿ ಜ. 19ರಂದು ಬೆಂಗಳೂರಿಗೆ ತೆರಳಲು ಮನೆಯಿಂದ ಹೊರಟು ಸುಳ್ಯ ಬಸ್‌ ನಿಲ್ದಾಣದಿಂದ ಬಸ್ಸು ಹತ್ತಿ ಹೊರಟು ಬೆಂಗಳೂರಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

ಬಳಿಕ ಗಣೇಶ್‌ ಅವರು ಬೆಂಗಳೂರಿಗೆ ತಲುಪಿದ ಬಗ್ಗೆ ಖಚಿತಪಡಿಸಲು ಫೋನ್‌ ಮಾಡಿದಾಗ ಮೊಬೈಲ್‌ ನಂಬರ್‌ ಸ್ವಿಚ್ಡ್‌ ಆಫ್‌ ಆಗಿದ್ದು, ಮಾಲೀಕ ರಂಜಿತ್‌ ಅವರಲ್ಲಿ ವಿಚಾರಿಸಿದಾಗ ಬಂದಿಲ್ಲ ಎಂದಿದ್ದಾರೆ.ಈ ಬಗ್ಗೆ ಗಣೇಶ್‌ ಅವರ ತಂದೆ ಸುಳ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!