Saturday, June 6, 2026
Homeಕರಾವಳಿಉಡುಪಿಉಡುಪಿ: ಮನೆಯೊಂದರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿದ್ದ  ದಂಪತಿ ಅರೆಸ್ಟ್

ಉಡುಪಿ: ಮನೆಯೊಂದರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿದ್ದ  ದಂಪತಿ ಅರೆಸ್ಟ್

- Advertisement -
- Advertisement -

ಉಡುಪಿ: ಮನೆಯೊಂದರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿದ್ದ  ದಂಪತಿ ಅರೆಸ್ಟ್ ಆಗಿರುವ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಕುಂದಾಪುರ ಗುಜ್ಜಾಡಿ ನಿವಾಸಿ ವಿನಾಯಕ (41) ಹಾಗೂ‌ ಆತನ ಪತ್ನಿ ಪ್ರಮೀಳಾ(30) ಬಂಧಿತ ದಂಪತಿ.

ಮಂಗಳವಾರ ಬೆಳಿಗ್ಗೆ ಕುಂದಾಪುರ ತಾಲೂಕಿನ ತ್ರಾಸಿ ಬೀಚ್ ಬಳಿಯ ಉದಯ ಪೂಜಾರಿ ಎಂಬವರ ಮನೆಯಲ್ಲಿ ಬ್ಯಾಗ್‌ನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್-1, 16 ಗ್ರಾಂ ತೂಕದ ಬಳೆ-1 ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರವನ್ನು ಕಳ್ಳತನ ಮಾಡಲಾಗಿತ್ತು.ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಎಂಬಾಕೆಯನ್ನು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತರಿಂದ ಕಳವು ಮಾಡಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್-1, 16 ಗ್ರಾಂ ತೂಕದ ಬಳೆ-1 ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರ ಸಹಿತ ಒಟ್ಟು 2 ಲಕ್ಷ ಮೌಲ್ಯದಆಭರಣ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್‌ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. 

- Advertisement -

Latest News

error: Content is protected !!