Saturday, May 4, 2024
Homeತಾಜಾ ಸುದ್ದಿಹನಿಮೂನ್ ವೇಳೆ ಭಯಾನಕ ಸತ್ಯ ಬಿಚ್ಚಿಟ್ಟ ಪತಿ, ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಹನಿಮೂನ್ ವೇಳೆ ಭಯಾನಕ ಸತ್ಯ ಬಿಚ್ಚಿಟ್ಟ ಪತಿ, ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

spot_img
- Advertisement -
- Advertisement -

ಲಖನೌ: ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಯೊಬ್ಬಳು ತನ್ನ ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅದಕ್ಕೆ ಕಾರಣ ಹನಿಮೂನ್ ದಿನ ಪತಿ ಹೇಳಿದ ಆ ಭಯಾನಕ ಸತ್ಯ. ಇಂತಹದ್ದೊಂದು ಘಟನೆ ನಡೆದಿರೋದು ಉತ್ತರ ಪ್ರದೇಶದ ಆಗ್ರಾದಲ್ಲಿ.

ಯೆಸ್… ನವದಂಪತಿಗೆ  ಹೋಟೆಲ್​ ಒಂದರಲ್ಲಿ ಹನಿಮೂನ್​ಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದೇ ದಿನ ಪತಿ ತಾನೋರ್ವ ಸಲಿಂಗಕಾಮಿ ಮತ್ತು ತನಗೆ ಗಂಭೀರವಾದ ಕಾಯಿಲೆ ಇರುವುದಾಗಿ ಪತ್ನಿ ಬಳಿ ಹೇಳಿದ್ದಾನೆ. ಅಲ್ಲದೇ  ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಂದ್ಹಾಗೆ ಆ ಸಂತ್ರಸ್ತ ಮಹಿಳೆಯು ಉತ್ತರ ಪ್ರದೇಶದ ಕೊಟ್ವಾಲಿ ಏರಿಯಾದವಳು. ಆಲಿಘಡ ರಸ್ತೆಯಲ್ಲಿ ವಾಸವಿರುವ ವ್ಯಕ್ತಿಯೊಂದಿಗೆ 2019ರ ಮೇ ತಿಂಗಳಲ್ಲಿ ಮದುವೆಯಾಗಿತ್ತು. ತನ್ನ ಗಂಡ ಓರ್ವ ಡಾಕ್ಟರ್​. ಮದುವೆಗಾಗಿ 30 ಲಕ್ಷ ಖರ್ಚು ಮಾಡಲಾಗಿತ್ತು. ಆದರೂ ಅತ್ತೆಗೆ ಇದು ಸಮಾಧಾನ ತಂದಿರಲಿಲ್ಲ. ಮದುವೆಯ ನಂತರವೂ ಹಣಕ್ಕಾಗಿ ಪೀಡಿಸಿದರು ಎಂದು ದೂರಿದ್ದಾಳೆ. ಅಲ್ಲದೇ ನನ್ನನ್ನು ಅನೇಕ ಬಾರಿ ಸಾಯಿಸೋದಕ್ಕೂ ಯತ್ನಿಸಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.

- Advertisement -
spot_img

Latest News

error: Content is protected !!