Tuesday, May 14, 2024
Homeತಾಜಾ ಸುದ್ದಿ90 ದಿನಗಳಲ್ಲಿ 350 ಕೋರ್ಸ್ ಮಾಡಿ ವಿಶ್ವದಾಖಲೆ ಮಾಡಿದ ಕೇರಳದ ಯುವತಿ

90 ದಿನಗಳಲ್ಲಿ 350 ಕೋರ್ಸ್ ಮಾಡಿ ವಿಶ್ವದಾಖಲೆ ಮಾಡಿದ ಕೇರಳದ ಯುವತಿ

spot_img
- Advertisement -
- Advertisement -

ಕೇರಳ : ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಜನ ಮನೆಯಲ್ಲೇ ಇರೋದು ಹೇಗಪ್ಪಾ ಅಂತಾ ಪರದಾಡುತ್ತಿದ್ದರೆ ಮತ್ತೆ ಕೆಲವರು ಅದೇ ಸಮಯವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಅದರಲ್ಲೂ ಕೇರಳದ ಯುವತಿಯೊಬ್ಬರು ಲಾಕ್ ಡೌನ್ ವೇಳೆ ವಿಶ್ವದಾಖಲೆಯನ್ನೇ ಮಾಡಿದ್ದಾರೆ.

ಯೆಸ್…ಕೇರಳದ ಯುವತಿಯೊಬ್ಬರು ಮೂರು ತಿಂಗಳ ಅವಧಿಯಲ್ಲಿ ಆನ್ಲೈನ್‌ 350 ವಿವಿಧ ಕೋರ್ಸ್‌ಗಳನ್ನು ಪೂರೈಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕೊಚ್ಚಿಯ ಎಲಮಕ್ಕರಾದ ನಿವಾಸಿಯಾದ ಆರತಿ ರಘುನಾಥ್‌ ಈ ರೀತಿಯಲ್ಲಿ ಲಾಕ್‌ಡೌನ್ ಸದ್ಬಳಕೆ ಮಾಡಿಕೊಂಡಿದ್ದಾರೆ.

ಇಲ್ಲಿನ ಎಂಇಎಸ್‌ ಕಾಲೇಜಿನಲ್ಲಿ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಎರಡನೇ ವರ್ಷದ ಎಂ.ಎಸ್ಸಿ. ಓದುತ್ತಿರುವ ಆರತಿ, ವಿಶ್ವ ಖ್ಯಾತ ವಿವಿಗಳಾದ ಜಾನ್ ಹಾಕಿನ್ಸ್, ಡೆನ್ಮಾರ್ಕ್ ತಾಂತ್ರಿಕ ವಿವಿ, ವರ್ಜಿನಿಯಾ ವಿವಿ, ನ್ಯೂಯಾರ್ಕ್ ರಾಜ್ಯ ವಿವಿ, ಕೊಲರಾಡೋ ಬೌಲ್ಡರ್‌, ಕೋಪನ್ ‌ಹೇಗನ್ ವಿವಿ, ರಾಚೆಸ್ಟರ್‌ ವಿವಿ ಹಾಗೂ ಎಮೋರಿ ವಿವಿಗಳು ಕೊಡಮಾಡುವ ಕೋರ್ಸ್‌ಗಳನ್ನು ಸಹ ಪೂರೈಸಿದ್ದಾರೆ.

- Advertisement -
spot_img

Latest News

error: Content is protected !!