Thursday, May 2, 2024
Homeತಾಜಾ ಸುದ್ದಿಫೇಸ್ ಬುಕ್ ಲೈವ್ ನಲ್ಲಿ ಹಿಂದಿನ ಜೀವನದ ಕುರಿತು ಮನಬಿಚ್ಚಿ ಮಾತನಾಡಿ ಕಣ್ಣೀರು ಸುರಿಸಿದ ಆಂಕರ್...

ಫೇಸ್ ಬುಕ್ ಲೈವ್ ನಲ್ಲಿ ಹಿಂದಿನ ಜೀವನದ ಕುರಿತು ಮನಬಿಚ್ಚಿ ಮಾತನಾಡಿ ಕಣ್ಣೀರು ಸುರಿಸಿದ ಆಂಕರ್ ಅನುಶ್ರೀ

spot_img
- Advertisement -
- Advertisement -

ಬೆಂಗಳೂರು: ಡ್ರಗ್ಸ್ ಸೇವನೆ ಬಗೆಗಿನ ಆರೋಪದಿಂದ ನನಗೆ ಶಾಕ್ ಆಗಿದೆ. ನಾನು ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗುವವಳಲ್ಲ. ನಾನು ತುಂಬಾ ಬಡತನದಿಂದ ಬಂದವಳು. ನನಗೆ ಮೊದಲಿನಿಂದಲೂ ಪಾರ್ಟಿ ಬಗ್ಗೆ ಆಸಕ್ತಿಯಲ್ಲ ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ.

ಡ್ರಗ್ಸ್ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಮಾತನಾಡಿರುವ ಅನುಶ್ರೀ, ಸಿಸಿಬಿ ನೊಟೀಸ್ ಬಂದಾಗ ಭಯವಾಯಿತು. 14 ವರ್ಷಗಳ ಹಿಂದೆ ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಹತ್ತಿ ಒಬ್ಬಳೇ ಬಂದೆ. ಕಷ್ಟಪಟ್ಟು ಇಲ್ಲಿಯವರೆಗೂ ಬಂದಿದ್ದೇನೆ. 12 ವರ್ಷಗಳ ಕಾಲ ಹಾಸ್ಟೆಲ್ ನಲ್ಲೇ ಇದ್ದೆ. ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗದ ನನಗೆ ಏಕಾಏಕಿ ಸಿಸಿಬಿ ನೊಟೀಸ್, ಪೊಲೀಸ್ ಎಂದಾಗ ಭಯವಾಯಿತು. ಯಾವುದೇ ಹುಡುಗಿಗಾದರೂ ಪೊಲೀಸ್ ಎಂದ ತಕ್ಷಣ ಭಯವಾಗುವುದು ಸಹಜ. ಧರ್ಯದಿಂದ ವಿಚಾರಣೆ ಎದುರಿಸಿ ಬಂದಿದ್ದೇನೆ. ಆದಾಗ್ಯೂ ನನ್ನ ಸುತ್ತ ಇಲ್ಲ ಸಲ್ಲದ ಆರೋಪ, ಮಾತುಗಳು ಕೇಳಿಬರುತ್ತಿರುವುದು ನೋವುಂಟು ಮಾಡುತ್ತಿದೆ ಎಂದಿದ್ದಾರೆ.

12 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿನ್ ಆಗಿದ್ದು, ಮತ್ತೆ ಅದೇ ನನ್ನ ಜೀವನದಲ್ಲಿ ಮುಳ್ಳಾಗಿ ಬರುತ್ತೆ ಎಂದು ಯೋಚನೆ ಮಾಡಿರಲಿಲ್ಲ. ಈ ವಿಡಿಯೋವನ್ನು ನನ್ನ ಸಮರ್ಥನೆಗೆ ಮಾಡುತ್ತಿಲ್ಲ. ಎಲ್ಲರೂ ಅವರವರ ಅಭಿಪ್ರಾಯ ಹೇಳತ್ತಿದ್ದಾರೆ. ಸಿಸಿಬಿ ವಿಚಾರಣೆಗೆ ಕರೆಯಲು ನೋಟಿಸ್ ಬಂದಿರುವುದು ಬೇಜಾರಾಗಿಲ್ಲ. ಸಿಸಿಬಿ ಕಚೇರಿಗೆ ಹೋದ ಕಾರಣ ನಾನು ಆರೋಪಿಯಲ್ಲ. ‌ ನಾನು ಯಾವತ್ತೂ ಡ್ರಗ್ಸ್ ಸೇವನೆ ಮಾಡಿಲ್ಲ. ನಾನು ಶೂಟಿಂಗ್ ಗೆ ಮಾತ್ರ ಹೋಗುತ್ತೇನೆ ಹೊರತು ಪಾರ್ಟಿಗಳಲ್ಲಿ ಭಾಗಿಯಾಗಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ಹೇಗೆ ಬಂತೆಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ”ಅನುಶ್ರೀ.. ಇದು ಕನ್ನಡಿಗರು ಕೊಟ್ಟ ಹೆಸರು. ಈ ಹೆಸರಿಗೆ ಧಕ್ಕೆ ತರುವ ಕೆಲಸವನ್ನು ನಾನು ಮಾಡಲ್ಲ” ಅಂತ ಫೇಸ್ ಬುಕ್ ಲೈವ್ ನಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ.

ನಿಮ್ಮ ನಂಬಿಕೆ ನನಗೆ ಶಕ್ತಿ ?

Posted by Anchor Anushree on Thursday, 1 October 2020

- Advertisement -
spot_img

Latest News

error: Content is protected !!