Friday, June 5, 2026
Homeತಾಜಾ ಸುದ್ದಿಧರ್ಮಸ್ಥಳದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಮನೆಗೆ ನುಗ್ಗಿ ಅಪಹರಿಸಿದ ಸಂಬಂಧಿಗಳು!

ಧರ್ಮಸ್ಥಳದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಮನೆಗೆ ನುಗ್ಗಿ ಅಪಹರಿಸಿದ ಸಂಬಂಧಿಗಳು!

- Advertisement -
- Advertisement -

ಚಿಕ್ಕಬಳ್ಳಾಫುರ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಬಂಧಿ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ಯುವತಿಯನ್ನು ಯುವಕನ ಮನೆಗೆ ನುಗ್ಗಿ ಸಂಬಂಧಿಕರು ಅಪಹರಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಫುರ ತಾಲೂಕಿನ ಮಂಡಿಕಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಂದನ ಹಾಗೂ ಮಂಜುನಾಥ್ ಪ್ರೀತಿಸಿ ಮದುವೆಯಾಗಿದ್ದರು.

ಏಪ್ರಿಲ್ 22 ರಂದು ಧರ್ಮಸ್ಥಳದಲ್ಲಿ ಚಂದನ ಮತ್ತು ಮಂಜುನಾಥ್ ಮದುವೆಯಾಗಿದ್ದು,ಬಳಿಕ ಚಂದನ ಗಂಡನ ಮನೆಯಲ್ಲಿ ಇದ್ದಳು ಎನ್ನಲಾಗಿದೆ.ಆದರೆ ಚಂದನ ಸಂಬಂಧಿಗಳು ಮನೆಗೆ ನುಗ್ಗಿ ಪತ್ನಿಯನ್ನು ಅಪಹರಿಸಿರುವುದಾಗಿ ಗಂಡ ಮಂಜುನಾಥ್ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಮಧ್ಯೆ ಸಂಬಂಧಿಕರಿಂದ ತನ್ನನ್ನು ರಕ್ಷಣೆ ಮಾಡುವಂತೆ ಚಂದನ ವೀಡಿಯೋ ಮೂಲಕ ಗಂಡ ಮಂಜುನಾಥ ಹಾಗೂ ಪೊಲೀಸರಿಗೆ ಮನವಿ ಮಾಡಿದ್ದಾಳೆ

- Advertisement -

Latest News

error: Content is protected !!