Sunday, June 7, 2026
Homeತಾಜಾ ಸುದ್ದಿಚುನಾವಣೆ ನೆಪದಲ್ಲಿ ಮಗನ ಫೋಟೋ ಬಳಸಿದ್ರೆ ಹುಷಾರ್ ! ಸೊಸೆಗೆ ಖಡಕ್ ಎಚ್ಚರಿಕೆ ಕೊಟ್ಟ...

ಚುನಾವಣೆ ನೆಪದಲ್ಲಿ ಮಗನ ಫೋಟೋ ಬಳಸಿದ್ರೆ ಹುಷಾರ್ ! ಸೊಸೆಗೆ ಖಡಕ್ ಎಚ್ಚರಿಕೆ ಕೊಟ್ಟ ಡಿ ಕೆ ರವಿ ತಾಯಿ

- Advertisement -
- Advertisement -

ಬೆಂಗಳೂರು ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಸಿದ್ಧತೆ ಭರದಿಂದ ಸಾಗುತ್ತಿದೆ. ಇದರ ಮಧ್ಯೆ ಆರ್ ಆರ್ ನಗರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸೋದಕ್ಕೆ ದಿವಂಗತ ಡಿ ಕೆ ರವಿ ಪತ್ನಿ ಕುಸುಮಾ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹೀಗಿರುವಾಗಲೇ ಇದೀಗ ಸೊಸೆಯ ಈ ನಡೆಗೆ ಡಿ.ಕೆ. ರವಿ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗನ ಹೆಸರು ಬಳಸಿಕೊಂಡು ಚುನಾವಣೆ ಪ್ರಚಾರ ಅಥವಾ ಸಿಂಪತಿ ಗಿಟ್ಟಿಸಿಕೊಂಡರೆ ನಾನು ಸುಮ್ಮನಿರೋದಿಲ್ಲ. ಚುನಾವಣೆ ಸಮಯದಲ್ಲಿ ನನ್ನ ಮಗನ ಫೋಟೋ ಬಳಸಿಕೊಂಡರೆ ಪರಿಣಾಮ ಸರಿ ಇರೋದಿಲ್ಲ ಅಂತ ಸೊಸೆ ಕುಸುಮಾಗೆ ಡಿ.ಕೆ. ರವಿ ತಾಯಿ ಗೌರಮ್ಮ ಎಚ್ಚರಿಕೆ ನೀಡಿದ್ದಾರೆ.

ಇನ್ನು ಇದೇ ವೇಳೆ ಸೊಸೆ ವಿರುದ್ಧ ಹರಿಹಾಯ್ದಿರುವ ತಾಯಿ ಗೌರಮ್ಮ, ಅವಳು ನನ್ನ ಮಗನ ಜೊತೆಯಲ್ಲಿಯೇ ಹೋಗಿದ್ದಾಳೆ. ನನ್ನ ಮಗ ದುಡಿದ್ದಿದ್ದ ಹಣವನ್ನು ನುಂಗಿದ್ದಾಳೆ. ನಮ್ಮ ಕಷ್ಟಕ್ಕೆ ಆಕೆ ಆಗಿಲ್ಲ. ಬದುಕಿದ್ದೇವಾ ಎಂದು ಬಂದು ನೋಡಿಲ್ಲ. ಇವಾಗ ಮಗನ ಹೆಸರು ಹೇಳಿಕೊಂಡು ಚುನಾವಣೆಗೆ ನಿಲ್ಲುತ್ತಿದ್ದಾಳೆ. ನನಗೆ ಬಂದ ಕಷ್ಟ ಅವಳ ಅಪ್ಪ ಅಮ್ಮಂಗೂ ಬರುತ್ತದೆ. ಅದನ್ನು ನಾನು ನೋಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!