ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಈಗಾಗಲೇ ಅನುಶ್ರೀ ಅವರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಆದರೆ ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮಹತ್ವದ ಮಾಹಿತಿಯೊಂದು ಬಯಲಾಗಿದೆ.
ಹೌದು… ವಿಚಾರಣೆಗಾಗಿ ನಿರೂಪಕಿ ಅನುಶ್ರೀ ಅವ್ರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದ ವಿಚಾರ ಗೊತ್ತಾಗುತ್ತಿದ್ದಂತೆ, ಆಕೆ ರಾಜ್ಯದ ಮೂವರು ಪ್ರಭಾವಿ ರಾಜಕಾರಣಿಗಳಿಗೆ ಫೋನ್ ಮಾಡಿದ್ರು. ಇದನ್ನ ಕಂಡು ಸಿಸಿಬಿ ಪೊಲೀಸರೇ ದಂಗಾಗಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.
ಅನುಶ್ರೀ ತಮಗೆ ಸಿಸಿಬಿ ನೋಟಿಸ್ ಬಂದ ದಿನ ಮತ್ತು ಮರುದಿನ ಮುಖ್ಯಮಂತ್ರಿ, ಮಾಜಿ ಸಿಎಂ ಪುತ್ರ, ಹಾಗೂ ಕರಾವಳಿ ಮೂಲದ ರಾಜ್ಯ ನಾಯಕರೊಬ್ಬರಿಗೆ ಕರೆ ಮಾಡಿ ತುಂಬಾ ಸಮಯ ಮಾತನಾಡಿದ್ದಾರಂತೆ. ಅನುಶ್ರೀ ಕರೆ ಮಾಡಿದ ಡಿಟೇಲ್ಸ್ ನೋಡಿ ಸ್ವತಃ ಸಿಸಿಬಿ ಪೊಲೀಸರೇ ಶಾಕ್ ಆಗಿದ್ದಾರೆ ಎನ್ನಲಾಗ್ತಿದೆ.
ಇನ್ನು ಇಂದು ಬೆಳಿಗ್ಗೆಯಷ್ಟೇ ಸೋಷಿಯಲ್ ಮೀಡಿಯಾದ ಮೂಲಕ ಲೈವ್ಗೆ ಬಂದ ಅನುಶ್ರೀ ಡ್ರಗ್ಸ್ ಪ್ರಕರಣದಲ್ಲಿ ನಾನು ವಿಚಾರಣೆಗೆ ಹಾಜರಾಗಿದ್ದ ಮಾತ್ರಕ್ಕೆ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತದೆ ಎಂದು ಕಣ್ಣೀರು ಹಾಕಿದ್ದರು.


