Saturday, October 17, 2026
Homeಕರಾವಳಿಉಡುಪಿಉಡುಪಿಯಲ್ಲಿ ಗಾಳಕ್ಕೆ ಬಿದ್ದ 10 ಕೆಜಿ ತೂಕದ ಮುಗುಡು ಮೀನು...

ಉಡುಪಿಯಲ್ಲಿ ಗಾಳಕ್ಕೆ ಬಿದ್ದ 10 ಕೆಜಿ ತೂಕದ ಮುಗುಡು ಮೀನು…

- Advertisement -
- Advertisement -

ಉಡುಪಿ : ಮಳೆಗಾಲ ಬಂದ್ರೆ ಸಾಕು ಕರಾವಳಿಗರಿಗೆ ಮೀನೂಟದ ಹಬ್ಬ. ಕೇವಲ ಸಮುದ್ರದಿಂದ ಮಾತ್ರವಲ್ಲದೇ ಮನೆ ಸುತ್ತಮುತ್ತಲಿನ ಸಣ್ಣ ಪುಟ್ಟ ತೊರೆ, ನದಿಗಳಲ್ಲೂ ಮೀನುಗಳು ಲಭ್ಯವಾಗುತ್ತವೆ. ಅದರಲ್ಲೂ ಗಾಳ ಹಾಕಿ ಮೀನು ಹಿಡಿಯೋರು  ಮಳೆಗಾಲದಲ್ಲಿ ಕೊಂಚ ಬ್ಯುಸಿನೇ. ಹೀಗೆ ಉಡುಪಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ವೇಳೆ ವ್ಯಕ್ತಿಯೊಬ್ಬರಿಗೆ ಭಾರೀ ಗಾತ್ರದ ಮುಗುಡು ಮೀನೊಂದು ಗಾಳಕ್ಕೆ ಬಿದ್ದಿದೆ.

ಸುಮಾರು 10 ಕೆಜಿ ತೂಕದ ಮುಗುಡು  ಮೀನು ಸಿಕ್ಕಿದ್ದು ಸ್ಥಳೀಯರು ಮೀನು ನೋಡಿ ಹುಬ್ಬೇರಿಸಿದ್ದಾರೆ. ಈ ಸುಮಾರು ಮೂರುವರೆ ಅಡಿ ಉದ್ದವಿತ್ತು. ಇಷ್ಟು ದೊಡ್ಡ ಮೀನು ಸಿಗೋದು ತೀರಾ ಅಪರೂಪ. ಇನ್ನು ತುಳುವಿನಲ್ಲಿ ಮುಗುಡು ಎಂದು ಕರೆಸಿಕೊಳ್ಳುವ ಈ ಮೀನನ್ನು ಇಂಗ್ಲೀಷ್ ನಲ್ಲಿ ಕ್ಯಾಟ್ ಫಿಶ್ ಎನ್ನುತ್ತಾರೆ. ಬೆಕ್ಕಿನ ತರಹ ಎರಡು ಮೀಸೆಗಳಿರೋದು ಈ ಮೀನಿನ ವಿಶೇಷ. ಇದೀಗ ಭಾರೀ ಗಾತ್ರದ ಮೀನು ಸಿಕ್ಕಿದ್ದು ಸುತ್ತಮುತ್ತಲಿನ ಮನೆಯವರಿಗೂ ಹಬ್ಬದೂಟ ನೀಡಿದೆ.

- Advertisement -

Latest News

error: Content is protected !!