Thursday, June 4, 2026
Homeತಾಜಾ ಸುದ್ದಿಕರ್ತವ್ಯ ಮುಗಿಸಿ ಮನೆಗೆ ಬರ್ತಿದ್ದಂತೆಯೇ ಸರ್ಕಲ್ ಇನ್ಸ್ ಪೆಕ್ಟರ್ ಗೆ ಹೃದಯಾಘಾತ!

ಕರ್ತವ್ಯ ಮುಗಿಸಿ ಮನೆಗೆ ಬರ್ತಿದ್ದಂತೆಯೇ ಸರ್ಕಲ್ ಇನ್ಸ್ ಪೆಕ್ಟರ್ ಗೆ ಹೃದಯಾಘಾತ!

- Advertisement -
- Advertisement -

ಶಿವಮೊಗ್ಗ:  ಜೋಡಿ ಕೊಲೆ ತನಿಖೆ ನಡೆಸಿ ಮನೆಗೆ ಬಂದ ಕೆಲ ಹೊತ್ತಲ್ಲೇ ಸಾಗರ ಪೊಲೀಸ್ ಠಾಣೆಯ ಸುನೀಲ್ ಕುಮಾರ್ ಅವರು ಹೃದಯಾಘಾತಕ್ಕೆ ಒಳಗಾದ ಘಟನೆ ನಡೆದಿದೆ.

ನಿನ್ನೆ ಮಧ್ಯರಾತ್ರಿ  ಬ್ಯಾಕೋಡು ಗ್ರಾಮದಲ್ಲಿ ಜೋಡಿ ಕೊಲೆ ನಡೆದಿತ್ತು. ಇದರ ತನಿಖೆಗೆ ತೆರಳಿ ಶವಗಳನ್ನು ಶವಾಗಾರಕ್ಕೆ‌ ಸಾಗಿಸಿದ ನಂತರ ಸರ್ಕಲ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಇಂದು ಬೆಳಗ್ಗೆ ಆರು ಗಂಟೆಗೆ ತಮ್ಮ ಮನೆಗೆ ಬಂದಿದ್ದ‌ರು.

ಮನೆಗೆ ಬಂದ ಕೆಲ ಹೊತ್ತಿನಲ್ಲೇ ಸುನೀಲ್ ಕುಮಾರ್ ಅವರಿಗೆ ಹೃದಯಾಘಾತವಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ.

- Advertisement -

Latest News

error: Content is protected !!