Sunday, June 7, 2026
Homeತಾಜಾ ಸುದ್ದಿಕಂಗನಾ ಕಚೇರಿ ಧ್ವಂಸಗೊಳಿಸದಂತೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ

ಕಂಗನಾ ಕಚೇರಿ ಧ್ವಂಸಗೊಳಿಸದಂತೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ

- Advertisement -
- Advertisement -

ಮುಂಬೈ: ನಟಿ ಕಂಗನಾ ರಾಣಾವತ್ ಗೆ ಸೇರಿದ ಕಟ್ಟಡವನ್ನು ಧ್ವಂಸಗೊಳಿಸದಂತೆ ಮಹಾರಾಷ್ಟ್ರ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ. ಇಂದು ಬೆಳಗ್ಗೆ ಕಂಗನಾ ಪರ ವಕೀಲ ಬಿಎಂಸಿ ಕಾರ್ಯಾಚರಣೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಈ ಮೂಲಕ ಮುಂಬೈ ಮಹಾನಗರ ಪಾಲಿಕೆಯ ಕಾರ್ಯಾಚರಣೆಗೆ ತಡೆ ನೀಡಿದಂತಾಗಿದೆ.

ಕಂಗನಾ ರಾಣಾವತ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಮತ್ತೆ ಮುಮದುವರೆದಿದೆ. ಇಂದು ಬೆಳ್ಳಂಬೆಳಗ್ಗೆ ಬಿಎಂಸಿ ಅಧಿಕಾರಿಗಳು ಕಂಗನಾ ಅವರ ಕಟ್ಟಡ ಅಕ್ರಮವಾಗಿದೆ ಎಂದು ಹೇಳಿ ಕಟ್ಟಡ ನೆಲಸಮಕ್ಕೆ ಮುಂದಾಗಿದ್ದರು. ಪಾಲಿ ಹಿಲ್ ನಲ್ಲಿರುವ ಕಂಗನಾ ಅವರ ಮಣಿಕರ್ಣಿಕಾ ಕಚೇರಿಯನ್ನು ನೆಲಸಮಗೊಳಿಸಲು ಅಧಿಕಾರಿಗಳು ಮುಂದಾಗಿದ್ದರು.

ಇಂದು ಬೆಳಗ್ಗೆಯಷ್ಟೇ ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ತಮ್ಮ ಮನೆಯಿಂದ ಹೊರಟ ಕಂಗನಾ ಮುಂಬೈಗೆ ಮರಳಿದ್ದಾರೆ. ಅವರು ಮುಂಬೈಗೆ ಆಗಮಿಸುವ ಮುಂಚೆಯೇ ಮಹಾ ಸರ್ಕಾರ ಕಚೇರಿಯ ತೆರವು ಕಾರ್ಯಾಚರಣೆ ನಡೆಸುತ್ತಿತ್ತು.

- Advertisement -

Latest News

error: Content is protected !!