Sunday, June 7, 2026
Homeತಾಜಾ ಸುದ್ದಿಡ್ರಗ್ಸ್ ಆರೋಪದಲ್ಲಿ ಬರೀ ಮೂವರು ಮಹಿಳೆಯರು ಮಾತ್ರನಾ? ಪಾರೂಲ್ ಯಾದವ್ ಗರಂ

ಡ್ರಗ್ಸ್ ಆರೋಪದಲ್ಲಿ ಬರೀ ಮೂವರು ಮಹಿಳೆಯರು ಮಾತ್ರನಾ? ಪಾರೂಲ್ ಯಾದವ್ ಗರಂ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟಿ ರಾಗಿಣಿ ಮತ್ತು ಸಂಜನಾರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಆದರೆ ಡ್ರಗ್ಸ್ ವಿಚಾರದಲ್ಲಿ ನಟಿಯರ ಹೆಸರು ಮಾತ್ರ ಕೇಳಿ ಬಂದ ಹಿನ್ನೆಲೆಯಲ್ಲಿ ನಟಿ ಪಾರೂಲ್ ಯಾದವ್ ತಮ್ಮ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

ಅಂತಿಮವಾಗಿ ಲಿಂಗ ಸಮಾನತೆಗಾಗಿ ಹೋರಾಟ ಗೆದ್ದಿದೆ. ಡ್ರಗ್ಸ್ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕು. ಆದರೆ ಸ್ಪಷ್ಟವಾಗಿ ಭಾರತದಲ್ಲಿ ಡ್ರಗ್ಸ್ ಮಾರಾಟಗಾರರು/ಬಳಕೆದಾರರು ಮೂವರು ಮಹಿಳೆಯರು ಅಷ್ಟೇನಾ..ಬೇರೆ ಯಾರು ಭಾಗಿ ಆಗಿಲ್ಲವೇ.? ಕಾರ್ಪೊರೇಟ್ ಎಕ್ಸಿಕ್ಯೂಟ್ ಗಳು, ಉದ್ಯಮಿಗಳು, ಕ್ರೀಡಾಪಟುಗಳು ಅಥವಾ ನಟರು ಮಾದಕ ವಸ್ತುಗಳನ್ನು ಬಳಸುತ್ತಿಲ್ಲವೇ..? ಲಿಂಗ ಸಮಾನತೆ ಹಕ್ಕನ್ನು ಗೆದ್ದಿದ್ದೇವೆ ಎಂದು ವಿಜಯೋತ್ಸವ ಆಚರಿಸಬೇಕೇ ಅಥವಾ ನಮ್ಮಲ್ಲಿ ಕೆಲವರಿಗೆ ಬೇಟೆಯಾಡುವುದು ಎಷ್ಟು ಸುಲಭ ಎಂದು ನಾವು ಅಳಬೇಕೇ ಎಂದು ಪಾರುಲ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!