Monday, June 8, 2026
Homeಕರಾವಳಿಮಂಗಳೂರು: ನಾಪತ್ತೆಯಾಗಿದ್ದ ಜವಳಿ ಉದ್ಯಮಿ ಬಾವಿಯಲ್ಲಿ ಶವವಾಗಿ ಪತ್ತೆ..!

ಮಂಗಳೂರು: ನಾಪತ್ತೆಯಾಗಿದ್ದ ಜವಳಿ ಉದ್ಯಮಿ ಬಾವಿಯಲ್ಲಿ ಶವವಾಗಿ ಪತ್ತೆ..!

- Advertisement -
- Advertisement -

ಮಂಗಳೂರು: ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಜವಳಿ ಉದ್ಯಮಿಯೋರ್ವರ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ನಗರದ ಹೊರ ವಲಯದ ಮುಲ್ಕಿಯಲ್ಲಿ ನಡೆದಿದೆ.

ಮುಲ್ಕಿ ನಿವಾಸಿ ಭಾಸ್ಕರ ಮಲ್ಯ (74) ಮೃತಪಟ್ಟ ಉದ್ಯಮಿ. ಭಾಸ್ಕರ ಮಲ್ಯ ನಾಪತ್ತೆಯಾದ ಬಳಿಕ ಮನೆಯವರು ಸಾಕಷ್ಟು ಹುಡುಕಾಟದ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ. ಇಂದು ಭಾಸ್ಕರ ಮಯ್ಯ ಅವರ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.

ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ಅವರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ‌. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!