Saturday, July 4, 2026
Homeಕರಾವಳಿಮಂಗಳೂರುವಿಟ್ಲ ಪೊಲೀಸರ ದಾಳಿ: ಅಕ್ರಮ ಮರಳು ಸಾಗಾಟದ ಎರಡು ಟಿಪ್ಪರ್ ಲಾರಿಗಳ ವಶ

ವಿಟ್ಲ ಪೊಲೀಸರ ದಾಳಿ: ಅಕ್ರಮ ಮರಳು ಸಾಗಾಟದ ಎರಡು ಟಿಪ್ಪರ್ ಲಾರಿಗಳ ವಶ

- Advertisement -
- Advertisement -

ವಿಟ್ಲ, ಜು. 4: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಇಬ್ಬರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ ದೇವಾಡಿಗ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಾಲ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ KA-51-AA-3057 ಹಾಗೂ KA-21-C-6924 ನೋಂದಣಿ ಸಂಖ್ಯೆಯ ಮರಳು ತುಂಬಿದ್ದ ಎರಡು ಟಿಪ್ಪರ್ ಲಾರಿಗಳು ಪತ್ತೆಯಾಗಿವೆ.
ಲಾರಿಗಳ ಚಾಲಕರಾದ ಪುತ್ತೂರು ತಾಲೂಕಿನ ಕೊಡಿಪಾಡಿ ನಿವಾಸಿ ಮೊಹಮ್ಮದ್ ಇರ್ಪಾನ್ (28) ಹಾಗೂ ಕಬಕ ನಿವಾಸಿ ನೌಷದ್ (26) ಅವರನ್ನು ವಿಚಾರಿಸಿದಾಗ, ಕಡಬ ತಾಲೂಕಿನ ಅಲಂಕಾರು ಪ್ರದೇಶದಿಂದ ಯಾವುದೇ ಪರವಾನಿಗೆ ಅಥವಾ ಅಗತ್ಯ ದಾಖಲಾತಿಗಳಿಲ್ಲದೆ ಮರಳನ್ನು ಅಕ್ರಮವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಎರಡೂ ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 149/2026ರಡಿ, ಭಾರತೀಯ ನ್ಯಾಯ ಸಂಹಿತೆ (BNS)-2023, ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957 (MMDR Act) ಹಾಗೂ ಕರ್ನಾಟಕ ಕಿರು ಖನಿಜ ನಿಯಮಗಳು-1994ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

.

- Advertisement -

Latest News

error: Content is protected !!