Sunday, April 28, 2024
Homeತಾಜಾ ಸುದ್ದಿರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಸೈಬರ್ ಭದ್ರತಾ ನೀತಿ ಜಾರಿ

ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಸೈಬರ್ ಭದ್ರತಾ ನೀತಿ ಜಾರಿ

spot_img
- Advertisement -
- Advertisement -

ಬೆಂಗಳೂರು: ಸೈಬರ್ ವಂಚನೆಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ರಾಜ್ಯ ಸರಕಾರವು ಶೀಘ್ರದಲ್ಲೇ ಸೈಬರ್ ಭದ್ರತಾ ನೀತಿಯನ್ನು ಜಾರಿಗೆ ತರಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಅಸೋಚಾಂ ಸಂಘಟನೆಯು ವರ್ಚುಯಲ್ ರೂಪದಲ್ಲಿ ಏರ್ಪಡಿಸಿರುವ 12ನೇ ಜಾಗತಿಕ ಸಮಾವೇಶದಲ್ಲಿ ಸಚಿವರು ಈ ಘೋಷಣೆ ಮಾಡಿದ್ದಾರೆ.

ಉದ್ದೇಶಿತ ಸೈಬರ್ ಭದ್ರತಾ ನೀತಿಯು ಎಲ್ಲಾ ಆಯಾಮಗಳನ್ನೂ ಪರಿಗಣನೆಗೆ ತೆಗೆದುಕೊಂಡಿದೆ. ಈ ನೀತಿಯು ಜಾರಿಗೆ ಬಂದರೆ ಸರಕಾರದ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳಾದ ರಾಜ್ಯ ದತ್ತಾಂಶ ಕೇಂದ್ರ, ವೈಡ್ ಏರಿಯಾ ನೆಟ್ವರ್ಕ್ ಮತ್ತು ಇ-ಆಡಳಿತ ಸೌಲಭ್ಯಗಳು ಸುರಕ್ಷಿತವಾಗಿರಲಿವೆ ಎಂದು ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.

ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳಗೊಂಡಿದ್ದು, ಡಿಜಿಟಲ್ ವಹಿವಾಟಿನ ಪ್ರಮಾಣವು ಕಳೆದ ಆರು ವರ್ಷಗಳಲ್ಲಿ 8 ಪಟ್ಟು ಹೆಚ್ಚಿದೆ. ಇದರ ಜತೆಗೆ ಬ್ರಾಡ್-ಬ್ಯಾಂಡ್ ಅಂತರ್ಜಾಲ ಬಳಕೆದಾರರ ಸಂಖ್ಯೆಯು 2016ರಿಂದ 2021ರ ನಡುವೆ ಶೇ.79ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿದೆ. ಒಟ್ಟಿನಲ್ಲಿ ಸಾರ್ವಜನಿಕರು ವಂಚನೆಯ ಉದ್ದೇಶದ ಮೊಬೈಲ್ ಕರೆಗಳು, ಸಂದೇಶಗಳು, ಅಪರಿಚಿತ ಲಿಂಕ್ ಗಳು, ಅನಧಿಕೃತ ಕ್ಯೂಆರ್ ಕೋಡ್ ಇತ್ಯಾದಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದೂ ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕಿನ ಇತ್ತೀಚಿನ ವರದಿಯಂತೆ 2021-22ರಲ್ಲಿ ದೇಶದ ವಾಣಿಜ್ಯ ಬ್ಯಾಂಕುಗಳಲ್ಲಿ 1.38 ಟ್ರಿಲಿಯನ್ ರೂಪಾಯಿಗಳಷ್ಟು ಅಗಾಧ ಮೊತ್ತವು ಸೈಬರ್ ವಂಚನೆಗೆ ಒಳಗಾಗಿದೆ. ಅದರಲ್ಲೂ ಖಾಸಗಿ ಬ್ಯಾಂಕುಗಳಲ್ಲಿ ಕಾರ್ಡುಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಂಚನೆಗಳು ಅಗಾಧವಾಗಿ ನಡೆಯುತ್ತಿವೆ.

- Advertisement -
spot_img

Latest News

error: Content is protected !!