Wednesday, June 24, 2026
Homeಕರಾವಳಿಉಡುಪಿಹಿಜಾಬ್ ವಿಚಾರದಲ್ಲಿ ಪರೀಕ್ಷೆಗೆ ಗೈರಾದವರಿಗೆ ಮರುಪರೀಕ್ಷೆ ಇಲ್ಲ : ಪದವಿ ಪೂರ್ವ ಶಿಕ್ಷಣ ಮಂಡಳಿ ಸ್ಪಷ್ಟನೆ

ಹಿಜಾಬ್ ವಿಚಾರದಲ್ಲಿ ಪರೀಕ್ಷೆಗೆ ಗೈರಾದವರಿಗೆ ಮರುಪರೀಕ್ಷೆ ಇಲ್ಲ : ಪದವಿ ಪೂರ್ವ ಶಿಕ್ಷಣ ಮಂಡಳಿ ಸ್ಪಷ್ಟನೆ

- Advertisement -
- Advertisement -

ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಇಲ್ಲ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ತಿಳಿಸಿದೆ.

ಇದರಿಂದ ಹಿಜಾಬ್ ಧರಿಸಿ ಹೋರಾಟ ನಡೆಸಿದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ ಬರೆದೇ ಉತ್ತೀರ್ಣವಾಗಬೇಕಾದ ಸಂಕಷ್ಟ ಎದುರಾಗಿದೆ. ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗಿತ್ತು. ಅಷ್ಟರಲ್ಲಾಗಲೇ ಹಿಜಾಬ್ ಕುರಿತ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಒಂದು ಧರ್ಮ ಪ್ರತಿನಿಧಿಸುವ ಬಟ್ಟೆ ಧರಿಸದೇ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿತ್ತು.

ಇದರ ನಡುವೆಯೂ ಹಿಜಾಬ್ ಗೆ ಆಗ್ರಹಿಸಿ ಹೋರಾಟ ನಡೆಸಿದ್ದ ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಮುಂದಾಗಿದ್ದರು. ಇದಕ್ಕೆ ಸರ್ಕಾರ ಅವಕಾಶ ಕೊಟ್ಟಿರಲಿಲ್ಲ. ಇದೀಗ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆ ಸಮೀಪಿಸಿದ್ದು, ಪ್ರಾಯೋಗಿಕ ಮರು ಪರೀಕ್ಷೆ ನಡೆಸದಿರಲು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ಧರಿಸಿದೆ

- Advertisement -

Latest News

error: Content is protected !!