Thursday, June 25, 2026
Homeಕೊಡಗುಮಡಿಕೇರಿಯಲ್ಲಿ ಮನೆ ಗ್ಯಾಸ್ ಆನ್ ಮಾಡಿ ಆತ್ಮಹತ್ಯೆ ಬೆದರಿಕೆ ಒಡ್ಡಿದ ಕುಟುಂಬ

ಮಡಿಕೇರಿಯಲ್ಲಿ ಮನೆ ಗ್ಯಾಸ್ ಆನ್ ಮಾಡಿ ಆತ್ಮಹತ್ಯೆ ಬೆದರಿಕೆ ಒಡ್ಡಿದ ಕುಟುಂಬ

- Advertisement -
- Advertisement -

ಮಡಿಕೇರಿ: ಮಡಿಕೇರಿ‌ ನಗರದಲ್ಲಿ ಕಲಾವಿದನ ಕುಟುಂಬದಿಂದ ಆತ್ಮಹತ್ಯೆ ಹೈಡ್ರಾಮಾ‌ ನಡೆದಿದೆ. ಮನೆಯ ಗ್ಯಾಸ್ ಸಿಲಿಂಡರ್ ಆನ್ ಮಾಡಿ ಸಾಮೂಹಿಕ ಆತ್ಮಹತ್ಯೆ‌ ಮಾಡಿಕೊಳ್ಳುವುದಾಗಿ ಕುಟುಂಬ ಬೆದರಿಕೆ ಹಾಕಿದೆ.

ಚಿತ್ರಕಲಾವಿದ ಸಂದೀಪ್ ವಿರುದ್ಧ ಅಕ್ರಮ‌ವಮನೆ ನಿರ್ಮಾಣದ ಆರೋಪ ಇದ್ದು, ನಗರಸಭೆ ಜಾಗದಲ್ಲಿ ಅಕ್ರಮ‌ ಮನೆ ನಿರ್ಮಾಣ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.

ಅಕ್ರಮ‌ ಸಕ್ರಮದ ಅಡಿಯಲ್ಲಿ ಮನೆ ಸಕ್ರಮಕ್ಕೆ ಅರ್ಜಿ ಹಾಕಿದ್ದು, ಸಂದೀಪ್ ಇಂದು ಫೇಸ್ ಬುಕ್ ನಲ್ಲಿ ವ್ಯಂಗ್ಯ ಚಿತ್ರ ಪ್ರಕಟಿಸಿದ್ದರು.

ಸಂದೀಪ್ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಸಭೆ ಆಯುಕ್ತ ರಾಮದಾಸ್ ಜೆಸಿಬಿ ತಂದು ಮನೆ ಒಡೆಯಲು ಮುಂದಾಗಿದ್ದರು.

ಮನೆ ಒಡೆಯಲು ಮುಂದಾದಾಗ ಸಂದೀಪ್ ಕುಟುಂಬ ಆತ್ಮಹತ್ಯೆ ಬೆದರಿಕೆ ಹಾಕಿದ್ದು, ಮನೆ ಗ್ಯಾಸ್ ಆನ್ ಮಾಡಿ ಬೆಂಕಿಪೆಟ್ಟಿಗೆ ಹಿಡಿದು ಬೆದರಿಕೆಯೊಡ್ಡಿದ್ದಾರೆ‌.ಮಡಿಕೇರಿ ನಗರದ ಚೈನ್‌ಗೇಟ್ ಬಳಿ‌ ಘಟನೆ‌ ನಡೆದಿದೆ.

- Advertisement -

Latest News

error: Content is protected !!