Friday, May 10, 2024
Homeಕರಾವಳಿಉಡುಪಿಕಾಪು: ಸಾಲ ಕೊಡಿಸುವುದಾಗಿ ಹೇಳಿ ದಾಖಲೆಗಳನ್ನು ಪಡೆದು ವಂಚನೆ !

ಕಾಪು: ಸಾಲ ಕೊಡಿಸುವುದಾಗಿ ಹೇಳಿ ದಾಖಲೆಗಳನ್ನು ಪಡೆದು ವಂಚನೆ !

spot_img
- Advertisement -
- Advertisement -

ಕಾಪು: ಇಲ್ಲಿನ ಉಚ್ಚಿಲದಲ್ಲಿ ಸಾಲ ಕೊಡಿಸುವುದಾಗಿ ಹೇಳಿ ದಾಖಲೆಗಳನ್ನು ಪಡೆದು ವಂಚಿಸಿರುವುದಾಗಿ ಮುಮ್ರಾಜ್ ಎಂಬುವವರು ಇಬ್ಬರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಮ್ರಾಜ್ ಅವರು ತಮ್ಮ ಪರಿಚಯದ ಅನ್ವರ್ ಬಳಿ ಸಾಲ ಕೇಳಲು ಆತನ ಕಛೇರಿಯಲ್ಲಿ ಭೇಟಿಯಾಗಿದ್ದು , ಆಗ ಮುಮ್ರಾಜ್ ಅವರು ಆಧಾರ್ ಕಾರ್ಡ್ , ಪಾನ್ ಕಾರ್ಡ್ , ಗುರುತಿನ ಚೀಟಿ , 6 ಫೊಟೋ ನೀಡಿದ್ದರು . ಈ ವೇಳೆ ಅನ್ವರ್‌ ಸಾಲ ಮಾಡಿಸಿಕೊಡಲು 35,000 ರೂ . ಕೊಡಬೇಕಾಗುತ್ತದೆ ಎಂದು ಹೇಳಿದ್ದರು.

ಕೆಲವೊಂದು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದು ಮುಮ್ರಾಜ್ ಅವರಿಂದ 20,000 ರೂ . ಪಡೆದಿದ್ದ . ಇದರ ಜೊತೆಗೆ ಆತನ ಶುಲ್ಕ , ಸಾಲದ ಬಾಬು ಹಾಗೂ ದಾಖಲೆಗಳ ತಯಾರಿಕೆ ವೆಚ್ಚವೆಂದು 15,000 ರೂ ಪಡೆದಿದ್ದ , ಆದರೆ ಮುಮ್ರಾಜ್ ಅವರ ಖಾತೆಗೆ ಯಾವುದೇ ಸಾಲದ ಹಣ ಜಮೆ ಆಗದೇ ಇದ್ದಾಗ ಈ ಬಗ್ಗೆ ಅನ್ವರ್ ಬಳಿ ಕೇಳಿದಾಗ ನೆಪ ಹೇಳಿ ಮುಂದೂಡುತ್ತಿದ್ದ .

ಈ ನಡುವೆ ಅನ್ವರ್ , ಮುಮ್ರಾಜ್ ಅವರ ಬಳಿ ನಿನ್ನ ಚೆಕ್ ನನ್ನ ಬಳಿ ಇದೆ. ಅದು ಈಗ ಬೇರೊಬ್ಬರ ಬಳಿ ಇರುವುದಾಗಿ ತಿಳಿಸಿದ್ದು , ಹೆಚ್ಚುವರಿ ರೂಪಾಯಿ 50,000 ನೀಡಿದಲ್ಲಿ ಮಾತ್ರ ಸಾಲ ನೀಡುವುದಾಗಿ ಹಾಗೂ ಚೆಕ್ಕುಗಳನ್ನು ಹಿಂದೆ ನೀಡುವುದಾಗಿ ಹೇಳಿದ್ದಾರೆ . ಹಾಗೇ ಬಿನಾಜ್ ಹಾಗೂ ಅನ್ವರ್ ನ ಪತ್ನಿ ಮುಮ್ರಾಜ್ ಅವರ ಮನೆಗೆ ಬಂದು ಬೆದರಿಕೆ ಹಾಕಿದ್ದು ಮಾತ್ರವಲ್ಲದೆ ಮತ್ತೆ 45,000 ಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!