Friday, June 5, 2026
Homeಅಪರಾಧಬಂಟ್ವಾಳ: ಚೂರಿಯೊಂದಿಗೆ ಮಿತ್ತಬೈಲ್ ಮಸೀದಿಗೆ ನುಗ್ಗಲು ಯತ್ನ; ಆರೋಪಿ ಪೋಲಿಸರ ವಶ

ಬಂಟ್ವಾಳ: ಚೂರಿಯೊಂದಿಗೆ ಮಿತ್ತಬೈಲ್ ಮಸೀದಿಗೆ ನುಗ್ಗಲು ಯತ್ನ; ಆರೋಪಿ ಪೋಲಿಸರ ವಶ

- Advertisement -
- Advertisement -

ಬಂಟ್ವಾಳ: ಚೂರಿಯೊಂದಿಗೆ ಮಸೀದಿಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಸ್ಥಳದಲ್ಲಿದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ  ಮಿತ್ತಬೈಲ್ ಮಸೀದಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.


ಕೆಂಪು ಬಣ್ಣದ ಹೊಂಡಾ ಆ್ಯಕ್ಟಿವಾ ಸ್ಕೂಟರ್ ನಲ್ಲಿ ಬಂದ ವ್ಯಕ್ತಿ ಮಸೀದಿಯ ದರ್ಗಾ ಸಮೀಪ ಅನುಮಾನಾಸ್ಪವಾಗಿ ವರ್ತಿಸುತ್ತಿರುವುದನ್ನು ಕಂಡ ಮಸೀದಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿರುವವರು ಆತನನ್ನು ವಿಚಾರಿಸಿದ್ದಾರೆ. ಅನುಮಾನಸ್ಪದವಾಗಿ ಉತ್ತರ ನೀಡಿದಾಗ ಅನುಮಾನಗೊಂಡ ಕೆಲಸದವರು ಆತನನ್ನು ತಡೆದು ಸ್ಕೂಟರ್ ಪರಿಶೀಲಿಸಿದಾಗ ಅದರಲ್ಲಿ ಮಾರಕಾಯುಧಗಳು ಪತ್ತೆಯಾಗಿದೆ. ಕೂಡಲೇ ಕೆಲಸದವರು ಆತನನ್ನು ಹಿಡಿದು ಮಸೀದಿ ಆಳಿತ ಕಮಿಟಿಯವರಿಗೆ ಮಾಹಿತಿ ನೀಡಿದ್ದು ಕಮಿಟಿಯವರು ಆತನನ್ನು ವಿಚಾರಿಸಿದಾಗ ಆತ ಕಲ್ಲಡ್ಕದ ನಿವಾಸಿ, ಹೆಸರು ಬಾಬು ಎಂದು ತಿಳಿದು ಬಂದಿದೆ.


ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!