Monday, April 29, 2024
Homeಕರಾವಳಿಬೆಳ್ತಂಗಡಿ : ಅರಣ್ಯಾಧಿಕಾರಿಗೆ ಶಾಸಕ ಪೂಂಜ ಅವ್ಯಾಚ ಶಬ್ದ ಉಪಯೋಗಿಸಿ ನಿಂದಿಸಿದ ಪ್ರಕರಣ:ಕರ್ನಾಟಕ ರಾಜ್ಯ ವಲಯ...

ಬೆಳ್ತಂಗಡಿ : ಅರಣ್ಯಾಧಿಕಾರಿಗೆ ಶಾಸಕ ಪೂಂಜ ಅವ್ಯಾಚ ಶಬ್ದ ಉಪಯೋಗಿಸಿ ನಿಂದಿಸಿದ ಪ್ರಕರಣ:ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘ ಖಂಡನೆ

spot_img
- Advertisement -
- Advertisement -

ಬೆಳ್ತಂಗಡಿ : ಕಳೆಂಜ ಅಮ್ಮಿನಡ್ಕದ ಮೀಸಲು ಅರಣ್ಯ ಪ್ರದೇಶದ ಜಾಗದಲ್ಲಿ ಅಕ್ರಮ ಮನೆಯ ಫೌಂಡೇಷನ್ ಕಿತ್ತೆಸೆದ ಪ್ರಕರಣದ ಬಳಿಕ ಮರು ಮನೆ ನಿರ್ಮಾಣ ಮಾಡಿದ ಪ್ರಕರಣ ಸಂಬಂಧ ಅ.9 ರಂದು ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡ ತೆರೆವು ಮಾಡಲು ಮುಂದಾದಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ಗೆ ಅವ್ಯಾಚ ಶಬ್ಧ ಪ್ರಯೋಗಿಸಿದ್ದನ್ನು ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿ ಸಂಘ(ರಿ) ಬೆಂಗಳೂರು ಇವರು ಖಂಡಿಸಿದ್ದಾರೆ.

ಸಂಘದ ಪತ್ರಿಕಾ ಪ್ರಕಟಣೆ ವಿವರ: ಮಂಗಳೂರು ವಿಭಾಗದ ಉಪ್ಪಿನಂಗಡಿ ವಲಯದ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿನಡ್ಕ ನಿಡ್ಲೆ ವಿಸ್ತೃತ ಬ್ಲಾಕ್-2  ಮೀಸಲು ಅರಣ್ಯ ಪ್ರದೇಶದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ಹಾಗೂ ಸಿಬ್ಬಂದಿಯವರು ಒತ್ತುವರಿ ತೆರವುಗೊಳಿಸುವ ಸಮಯದಲ್ಲಿ ಬೆಳ್ತಂಗಡಿ ಶಾಸಕರು ಹರೀಶ್ ಪೂಂಜ ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ ಕೆ ಅವರಿಗೆ ಅವ್ಯಾಚ ಶಬ್ದದ ಪ್ರಯೋಗಿಸಿ ನಿಂದಿಸಿರುವುದು ಖಂಡನೀಯ. ಆ ಅವ್ಯಾಚ ಶಬ್ದದ ಬಗ್ಗೆ ಕನಿಷ್ಠ ಸೌಜನ್ಯಕ್ಕಾದರೂ ಕ್ಷಮೆ ವ್ಯಕ್ತಪಡಿಸುವುದು  ಶಾಸಕರಿಗೆ ಶೋಭೆತರುವಂತಹುದಲ್ಲ. ಈ ಕೃತ್ಯವನ್ನು ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಯವರ ಸಂಘ (ರಿ) ಬೆಂಗಳೂರು ಸಂಘವು ಕಠಿಣ ಶಬ್ದಗಳಲ್ಲಿ ಖಂಡಿಸುತ್ತದೆ.

ಅಧಿಕಾರಿಗಳಾಗಲೀ , ಸಾರ್ವಜನಿಕರಾಗಲೀ, ಜನಪ್ರಿತಿನಿಧಿಗಳಾಗಲೀ ಅಥವಾ ಗೌರವಾನ್ವಿತ ಶಾಸಕರುಗಳಾಗಲೀ ಈ ನೆಲದ ಕಾನೂನನ್ನು ಪಾಲಿಸಬೇಕಾಗಿರುತ್ತದೆ. ಕಾನೂನಿಗಿಂತ ಯಾರು ಮಿಗಿಲಾಗಿರುವುದಿಲ್ಲ. ಒಂದು ವೇಳೆ ವಲಯ ಅರಣ್ಯಾಧಿಕಾರಿಗಳು ಏನೇ ಕರ್ತವ್ಯಚ್ಚುತಿ ಮಾಡಿದ್ದರೂ ಅದನ್ನು ಕಾನೂನಿನ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳಬೇಕಾಗಿರುವುದು ಶಾಸಕರಿಗೆ ತಿಳಿಯದೇ ಇರುವ ವಿಷಯವೇನಲ್ಲ. ಅಗ್ಗದ್ದಗ್ಯೂ ಮಾನ್ಯ ಗೌರವನ್ವಿತ ಶಾಸಕರು ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿಗೆ ತನ್ನ ಶಾಸಕರು ಬದ್ದಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಕರ್ತವ್ಯಕ್ಕೆ ಅಡ್ಡಿಉಂಟುಮಾಡಿ ಅವಾಚ್ಯವಾಗಿ ನಿಂಧಿಸಿರುವುದು ಅವರ ಘನತೆಗೆ ತಕ್ಕದ್ದಾಗಿರುವುದಿಲ್ಲ. ಈ ಘಟನೆಯನ್ನು ಸಂಘವು ಖಂಡಿಸುತ್ತಾ ಅರಣ್ಯ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಯವರಿಗೆ ಕಾನೂನಿನ ಅನ್ವಯ ಸಾರ್ವಜನಿಕ ಕೆಲಸ ನಿರ್ವಹಿಸಲು ನೈತಿಕ ಸ್ಥೈರ್ಯವನ್ನು ಸಂಘವು ನೀಡುತ್ತದೆ. ಮುಂದೆ ಇಂತಹ ಘಟನೆ ಮರುಕಳಿಸಿದ್ದಲ್ಲಿ ಹೋರಾಟಕ್ಕೂ ಸಹ ಸಂಘವು ಸಿದ್ದವಿರುತ್ತದೆ ಎಂದು ಈ ಮೂಲಕ ಸಂಘವು ಅಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

- Advertisement -
spot_img

Latest News

error: Content is protected !!