Monday, May 13, 2024
Homeಕರಾವಳಿಸುಬ್ರಮಣ್ಯದಲ್ಲಿ ಪ್ರವಾಸಿಗರ ಕಾರಿನಿಂದ ಚಿನ್ನಾಭರಣ ಕಳ್ಳತನ ;ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಸುಬ್ರಮಣ್ಯದಲ್ಲಿ ಪ್ರವಾಸಿಗರ ಕಾರಿನಿಂದ ಚಿನ್ನಾಭರಣ ಕಳ್ಳತನ ;ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -
ಸುಬ್ರಮಣ್ಯ ದೇಗುಲಕ್ಕೆ ಎಂದು ಬಂದಿದ್ದ ಕೇರಳದ ಭಕ್ತರೊಬ್ಬರ ಕಾರಿನ ಗಾಜು ಒಡೆದು ಚಿನ್ನ, ದಾಖಲೆ ಇದ್ದ ಬ್ಯಾಗ್‌ ಅನ್ನು ಕದ್ದ ಬಗ್ಗೆ ಕಣ್ಣೂರು ಜಿಲ್ಲೆಯ ಸುಯಿಶ್‌ ಟಿ.ಸಿ. (34) ಎಂಬವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರುಬ್ಯಾಗ್‌ನಲ್ಲಿದ್ದ ಅಂದಾಜು 14 ಗ್ರಾಂ ತೂಕದ ಚಿನ್ನದ ಬ್ರಾಸ್‌ ಲೈಟ್‌ ಹಾಗೂ ಆಧಾರ ಕಾರ್ಡ್‌, ಎಟಿಎಂ, ಇತ್ಯಾದಿ ಕಳವಾಗಿವೆ ಎಂದು ದೂರು ನೀಡಿದ್ದರು.ಅದರಂತೆ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಹೊನ್ನವಳ್ಳಿ ಮೂಲದ ಪ್ರಭಾಕರ್ (35) ಬಂಧಿತ ಆರೋಪಿ . ಈತ ಸುಬ್ರಹ್ಮಣ್ಯ ದೇಗುಲದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನ ಗ್ರಾಸ್ ಪುಡಿ ಮಾಡಿ 14 ಗ್ರಾಮ್ ಚಿನ್ನವನ್ನು ಕದ್ದಿದ್ದ. ಘಟನೆ ನಡೆದು ಕೆಲವೇ ಸಮಯದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಕೂಡಲೇ ಸುಬ್ರಹ್ಮಣ್ಯ ರೈಲು ನಿಲ್ದಾಣ ಬಳಿ ಆತನನ್ನು ಹಿಡಿದು ಆತನಿಂದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

 ಇನ್ನು ದೇವಸ್ಥಾನಗಳನ್ನೇ ತನ್ನ ಕಳ್ಳತನ ಸ್ಪಾಟ್ ಮಾಡಿಕೊಂಡಿದ್ದ ಈತ ಕಳೆದ 15 ದಿನದ ಹಿಂದೆಯಷ್ಟೇ  ಧರ್ಮಸ್ಥಳದಲ್ಲಿಯೂ 40ಗ್ರಾಮ್ ಚಿನ್ನವನ್ನು ಇದೇ ಮಾದರಿಯಲ್ಲಿ ಕದ್ದಿದ್ದೇನೆ ಎಂದು ಸುಬ್ರಮಣ್ಯ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಮಾತ್ರವಲ್ಲ, ಈತ ಸುಬ್ರಹ್ಮಣ್ಯದಲ್ಲಿಯೇ ಒಟ್ಟು ಎರಡು ಬಾರಿ ಈ ರೀತಿ ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ಠಾಣಾಧಿಕಾರಿ ಕಾರ್ತಿಕ್ ಅವರ ನೇತೃತ್ವದಲ್ಲಿ ಮುರಳಿಧರ್ (ತನಿಖೆ ) ಹಾಗೂ ಎರಡು ತಂಡ ರಚಿಸಲಾಗಿದ್ದು ಈತನನ್ನು ಕೂಡಲೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಠಾಣಾ ಸಿಬ್ಬಂದಿಯಾದ ಕರುಣಾಕರ, ಮಹೇಶ್, ಕುಮಾರ್, ಆನಂದ್, ವಿಠ್ಠಲ್ ಬಸವರಾಜ್, ರೋಹಿತ್, ಕೃಷ್ಣ ಅವರು ಸಹಕರಿಸಿದ್ದಾರೆ.

 

- Advertisement -
spot_img

Latest News

error: Content is protected !!