Saturday, June 6, 2026
Homeಕರಾವಳಿಮಂಗಳೂರುಪುತ್ತೂರು: ಗಾಳಿ ಮಳೆಗೆ ಎರಡು ಮನೆಗಳಿಗೆ ಹಾನಿ; ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

ಪುತ್ತೂರು: ಗಾಳಿ ಮಳೆಗೆ ಎರಡು ಮನೆಗಳಿಗೆ ಹಾನಿ; ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

- Advertisement -
- Advertisement -

ಪುತ್ತೂರು: ಗಾಳಿ ಮತ್ತು ಮಳೆಯಿಂದಾಗಿ ಪುತ್ತೂರು ತಾಲೂಕಿನ ಹಲವಡೆ ಹಾನಿ ಸಂಭವಿಸಿದೆ.ಪುತ್ತೂರಿನ ಉರ್ಲಾಂಡಿಯಲ್ಲಿ ಗಾಳಿಯಿಂದಾಗಿ ಮರ ಉರುಳಿ ಬಿದ್ದು ಮನೆಗೆ ಹಾನಿ ಉಂಟಾಗಿದ್ದು, ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿಯೂ‌ ಮನೆಗೆ ಹಾನಿ ಸಂಭವಿಸಿದೆ.

ಉರ್ಲಾಂಡಿಯಲ್ಲಿ ಶೋಭಾ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಭಾಗಶಃ ಹಾನಿಯಾಗಿದ್ದು, ಮನೆಯ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ‌.

ಬಪ್ಪಳಿಗೆಯ ಸಿಂಗಾಣಿ ನಿವಾಸಿ ಕಮಲ ಎಂಬವರ ಮನೆಗೆ ಕೂಡಾ ಮಳೆಯಿಂದ ಹಾನಿ ಸಂಭವಿಸಿದ್ದು, ಮನೆಯ ಮೇಲಿನ ಶೀಟ್ ಗಾಳಿಗೆ ಹಾರಿ ಹೋಗಿದೆ.

ಮಳೆ ಹಾನಿ ಉಂಟಾದ ಸ್ಥಳಗಳಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಪರಿಶೀಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

- Advertisement -

Latest News

error: Content is protected !!