Thursday, May 16, 2024
Homeಕರಾವಳಿಬಂಟ್ವಾಳದ ರೈಲ್ವೇ ಹಳಿಗೆ ಉರುಳಿ ಬಿದ್ದ ಕಾಂಕ್ರೀಟ್ ಮಿಕ್ಸರ್ ಟ್ರಕ್

ಬಂಟ್ವಾಳದ ರೈಲ್ವೇ ಹಳಿಗೆ ಉರುಳಿ ಬಿದ್ದ ಕಾಂಕ್ರೀಟ್ ಮಿಕ್ಸರ್ ಟ್ರಕ್

spot_img
- Advertisement -
- Advertisement -

ಬಂಟ್ವಾಳ: ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಯಂತ್ರವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್ ಪಾರ್ಮ್ ನಿಂದ ಕೆಳಗೆ ರೈಲ್ವೇ ಹಳಿಗೆ ಉರುಳಿ ಬಿದ್ದ ಘಟನೆ ನಡೆದಿದೆ.

ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕಾಮಗಾರಿ ನಿರ್ವಹಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಯಂತ್ರವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್ ಪಾರ್ಮ್ ನಿಂದ ಕೆಳಗೆ ರೈಲ್ವೇ ಹಳಿಗೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ರೈಲು ಅ ಸಮಯದಲ್ಲಿ ಬರದೆ ಇದ್ದುದರಿಂದ ಯಾವುದೇ ಅವಘಡಗಳು ಸಂಭವಿಸಿಲ್ಲ.

ಬಿ.ಸಿ.ರೋಡಿನ ಗಜಲಕ್ಷ್ಮೀ ಕ್ರೇನ್ ನವರು ಕಾರ್ಯ ಪ್ರವೃತರಾಗಿ ರೈಲು ಆಗಮಿಸುವ ಮೊದಲು ಯಂತ್ರವನ್ನು ತೆರವು ಗೊಳಿಸಿದರು.

ಇತ್ತೀಚೆಗೆ ಕೋಟ್ಯಾಂತರ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯಗಳಿಗಾಗಿ ಶಿಲಾನ್ಯಾಸ ನಡೆದಿದ್ದು, ಇದೀಗ ಕಾಮಗಾರಿ ಆರಂಭವಾಗಿದೆ. ರೈಲ್ವೆ ಪ್ಲಾಟ್ ಪಾರ್ಮ್ ನ ಸನಿಹದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ನಡೆಸುವ ಕಂಪೆನಿಯ ಕಾಂಕ್ರೀಟ್ ಮಿಕ್ಸರ್ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡ ಹಳಿಗೆ ಉರುಳಿ ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

- Advertisement -
spot_img

Latest News

error: Content is protected !!