Saturday, May 4, 2024
Homeಇತರನಾನು ಪತ್ರಕರ್ತೆ ಅಂತಾ ಸುಳ್ಳು ಹೇಳಿ, ಈಕೆ ಮಾಡಿದ್ದೇನು ಗೊತ್ತಾ?

ನಾನು ಪತ್ರಕರ್ತೆ ಅಂತಾ ಸುಳ್ಳು ಹೇಳಿ, ಈಕೆ ಮಾಡಿದ್ದೇನು ಗೊತ್ತಾ?

spot_img
- Advertisement -
- Advertisement -

ಬೆಂಗಳೂರು: ಜನರನ್ನು ಯಾಮಾರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಮಹಿಳಾ ಕ್ರೈಂ ರಿಪೋರ್ಟರ್​ ಜಯನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಭವಾನಿ ಬಂಧಿತೆ. ಈಕೆ, ‘ನಾನು ಮಾಧ್ಯಮವೊಂದರಲ್ಲಿ ಕ್ರೈಂ ರಿಪೋರ್ಟರ್​ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಪೊಲೀಸ್​ ಅಧಿಕಾರಿಗಳ ಪರಿಚಯವಿದೆ’ ಎಂದು ರುಕ್ಮಿಣಿ ಎಂಬುವವರಿಗೆ ನಂಬಿಸಿ ಅವರ ಹಣಕಾಸು ವ್ಯವಹಾರಕ್ಕೆ ನೆರವಾಗುವುದಾಗಿ ಹೇಳಿ 2 ಲಕ್ಷ ರೂ. ಕಮಿಷನ್​ ಪಡೆದು ವಂಚಿಸಿದ್ದಾಳೆ. ಈ ಬಗ್ಗೆ ಹಣ ಕಳೆದುಕೊಂಡ ಮಹಿಳೆಯು ಭವಾನಿ ವಿರುದ್ಧ ದೂರು ನೀಡಿದ್ದಾರೆ.

ಜಯನಗರ ನಿವಾಸಿ ರುಕ್ಮಿಣಿ ಎಂಬುವವರು ತನ್ನ ಮನೆ ಮಾರಿದ್ದ ಹಣವನ್ನು ಪರಿಚಯಸ್ಥರಿಗೆ ಸಾಲ ನೀಡಿದ್ದರು. ದಿನಕಳೆದಂತೆ ರುಕ್ಮಿಣಿಗೆ ಸಾಲ ವಾಪಸ್ ಬಂದಿರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ 6 ಲಕ್ಷ ರೂ. ವಸೂಲಿ ಕಷ್ಟವಾಗಿತ್ತು. ಹಣ ಕೊಡದೆ ಸತಾಯಿಸುತ್ತಿದ್ದರು. ಈ ವಿಷಯ ಅರಿತ ಭವಾನಿ, ‘ನನಗೆ ಪೊಲೀಸರು ಗೊತ್ತು. ಅವರಿಂದಲೇ ಕರೆ ಮಾಡಿಸಿ ಹಣ ವಾಪಸ್ ಕೊಡಿಸುವೆ’ ಎಂದು ನಂಬಿಸಿದ್ದಳು. ಅಲ್ಲದೆ ‘ನಿನಗೆ ಬರಬೇಕಿರುವ 6 ಲಕ್ಷ ರೂ.ಅನ್ನು ಸಾಲಗಾರರಿಂದ ಕೊಡಿಸಲು ನನಗೆ 2 ಲಕ್ಷ ರೂ. ಅನ್ನು ಮುಂಗಡವಾಗಿ ಕಮಿಷನ್​ ಕೊಡಬೇಕು’ ಎಂದು ಕಂಡಿಷನ್ ಕೂಡ ಹಾಕಿದ್ದಳು. ಹೇಗೋ ಬಂದಷ್ಟು ಹಣ ಬಂದರೆ ಸಾಕಪ್ಪ ಎಂಬ ಸ್ಥಿತಿಯಲ್ಲಿದ್ದ ರುಕ್ಮಿಣಿ, ಭವಾನಿಗೆ 2 ಲಕ್ಷ ರೂ. ಕೊಟ್ಟಿದ್ದರು.

ನಂತರ ರುಕ್ಮಿಣಿಗೆ ಬರಬೇಕಿದ್ದ ಸಾಲವನ್ನು ಭವಾನಿ ವಸೂಲಿ ಮಾಡಿಸಿ ಕೊಡಲಿಲ್ಲ. ಕೊನೆಗೆ 2 ಲಕ್ಷ ರೂ. ಕಮಿಷನ್​ ಹಣವನ್ನೂ ರುಕ್ಮಿಣಿಗೆ ಹಿಂತಿರುಗಿಸಲಿಲ್ಲ. ಕೊನೆಗೆ ಜಯನಗರ ಪೊಲೀಸ್​ ಠಾಣೆ ಮೆಟ್ಟಿಲೇರಿದ ರುಕ್ಮಿಣಿಗೆ ಗೊತ್ತಾಯ್ತು ಭವಾನಿ ಪತ್ರಕರ್ತೆ ಅಲ್ಲ, ಸುಳ್ಳು ಹೇಳಿದ್ದಾಳೆಂದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಕಲಿ ವರದಿಗಾರ್ತಿಯನ್ನು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!