Friday, June 5, 2026
Homeಮನರಂಜನೆನೇಣಿಗೆ ಶರಣಾದ ಕಿರುತೆರೆ ನಟ...

ನೇಣಿಗೆ ಶರಣಾದ ಕಿರುತೆರೆ ನಟ…

- Advertisement -
- Advertisement -

ಮುಂಬೈ : ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಸುತ್ತಿರುವಂತೆಯೇ ಮುಂಬೈನಲ್ಲಿ ಮತ್ತೊಬ್ಬ ನಟರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. 44 ವರ್ಷದ ಕಿರುತೆರೆ ನಟ ಸಮೀರ್ ಶರ್ಮಾ ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎರಡು ದಿನದ ಹಿಂದೆ ಅವರು ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಸಾವಿಗೆ ಏನು ಕಾರಣ ಎಂಬುದು ಗೊತ್ತಾಗಿಲ್ಲ.

ಮಲದ್ ವೆಸ್ಟ್​ನ ನೇಹಾ ಸಿಎಚ್​ಎಸ್ ಬ್ಯುಲ್ಡಿಂಗ್​ನಲ್ಲಿರುವ ಅವರ ಅಪಾರ್ಟ್​ಮೆಂಟ್​​ನಲ್ಲಿ ಸಮೀರ್ ಶರ್ಮಾ ಅವರ ಮೃತ ದೇಹವನ್ನು ಮೊದಲು ಕಂಡವರು ವಾಚ್​ಮ್ಯಾನ್. ರಾತ್ರಿ ಭದ್ರತೆ ಪರಿಶೀಲಿಸುವ ವೇಳೆ ಫ್ಯಾನಿಗೆ ನೇಣುಬಿಗಿದುಕೊಂಡಿದ್ದ ಮೃತ ದೇಹವನ್ನು ಕಿಟಕಿಯಿಂದ ಕಂಡ ವಾಚ್​ಮ್ಯಾನ್ ಕೂಡಲೇ ಬ್ಯುಲ್ಡಿಂಗ್ ಸೂಪರ್​ವೈಸರ್​ಗೆ ತಿಳಿಸಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ಹೋಗಿದೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ. ಮಲದ್ ಠಾಣೆಯ ಪೊಲೀಸರು ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!