Friday, June 5, 2026
Homeತಾಜಾ ಸುದ್ದಿಐಎಎಸ್ ಅಧಿಕಾರಿ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ!..ಕಾಡಾನೆಗೆ ಪ್ರಸಾದ ತಿನ್ನಿಸಿ ಟೀಕೆಗೆ ಗುರಿ

ಐಎಎಸ್ ಅಧಿಕಾರಿ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ!..ಕಾಡಾನೆಗೆ ಪ್ರಸಾದ ತಿನ್ನಿಸಿ ಟೀಕೆಗೆ ಗುರಿ

- Advertisement -
- Advertisement -

ಚಾಮರಾಜನಗರ: ಇಲ್ಲಿನ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಕಾಡಾನೆ ಬಂದಿದ್ದು ಅದಕ್ಕೆ ಪ್ರಸಾದ ತಿನ್ನಿಸಿದ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಪರಿಸರ ಪ್ರೇಮಿಗಳು ಕಿಡಿಕಾರಿದ್ದಾರೆ. ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಕಾಡಾನೆ ಬಂದಿತ್ತು. ಇದೇ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಬಿ.ಬಿ.ಕಾವೇರಿ, ಪೌರಾಡಳಿತ ಇಲಾಖೆ ನಿರ್ದೇಶಕಿ ಹಾಗು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಳೂ ದೇವಾಲಯದಲ್ಲಿ ಉಪಸ್ಥಿತರಿದ್ದರು.

ಈ ವೇಳೆ ಅಧಿಕಾರಿ ಕಾಡಾನೆಗೆ ದೇವಸ್ಥಾನದ ಪ್ರಸಾದ ತಿನ್ನಿಸಿ ವನ್ಯಜೀವಿ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ನಡೆಯನ್ನು ಪ್ರಶ್ನಿಸಲಾಗಿದೆ.ಅಧಿಕಾರಿ ವಿವೇಕಯುತವಾಗಿ ವರ್ತಿಸಬೇಕಿತ್ತು,ಪ್ರಸಾದದ ಆಸೆಯಿಂದ ಕಾಡಾನೆ ಮತ್ತೆ ಮತ್ತೆ ಊರಿಗೆ ದಾಳಿ ಇಟ್ಟರೆ ಮಾಡುವುದೇನು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

- Advertisement -

Latest News

error: Content is protected !!