Wednesday, June 24, 2026
Homeತಾಜಾ ಸುದ್ದಿಬನ್ನೇರಘಟ್ಟ ಸಫಾರಿ ವೇಳೆ ಕೆಟ್ಟ ವಾಹನ: ವಾಹನವನ್ನು ಹುಲಿ ಎಳೆಯುತ್ತಿರುವ ವಿಡಿಯೋ ವೈರಲ್

ಬನ್ನೇರಘಟ್ಟ ಸಫಾರಿ ವೇಳೆ ಕೆಟ್ಟ ವಾಹನ: ವಾಹನವನ್ನು ಹುಲಿ ಎಳೆಯುತ್ತಿರುವ ವಿಡಿಯೋ ವೈರಲ್

- Advertisement -
- Advertisement -

ಆನೇಕಲ್: ಸಫಾರಿಗೆ ಹೋದಾಗ ಪ್ರವಾಸಿಗರಿಗೆ ಹುಲಿ ಎದುರಾಗುವ, ಸಿಂಹ ಎದುರಾಗುವ ಹೀಗೆ ಪ್ರಾಣಿಗಳ ಅಪರೂಪದ ಸಾಕಷ್ಟು ವಿಡಿಯೋಗಳನ್ನು ನೀವೆಲ್ಲಾ ನೋಡ್ತೀರಾ.. ಇಂತಹದ್ದೇ ಅತೀ ಅಪರೂಪದ ಘಟನೆಯೊಂದು ಬೆಂಗಳೂರಿನ ಬನ್ನೇರುಘಟ್ಟ ಸಫಾರಿಯಲ್ಲಿ ನಡೆದಿದೆ.

ಹೌದು…ಬನ್ನೇರುಘಟ್ಟಕ್ಕೆ ಸಫಾರಿಗೆಂದು ಹೋದಾಗ ಬೆಂಗಾಲ್ ಹುಲಿ ಟೊಯೋಟಾ ವಾಹನವನ್ನು ಎಳೆದಾಡಿದ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು ಇದೀಗ ವಿಡಿಯೋ ಫುಲ್ ವೈರಲ್ ಆಗಿದೆ.

ಬ್ಯಾಟರಿ ಸಮಸ್ಯೆಯಿಂದ ಟೊಯೋಟಾ ಕಾರು ಒಂದು ಕಡೆ ನಿಂತಿತ್ತು. ಇದನ್ನು ನೋಡಿ ರೊಚ್ಚಿಗೆದ್ದ ವ್ಯಾಘ್ರ ವಾಹನವನ್ನು ಎಳೆದಾಡಿದ ಪರಿಣಾಮ ಟೊಯೋಟಾದಲ್ಲಿದ್ದವರು ಕಂಗಾಲಾಗಿದ್ದರು. ಟೊಯೋಟಾ ಹಿಂದೆ ಬರುತ್ತಿದ್ದ ವಾಹನದಲ್ಲಿದ್ದವರು ಹುಲಿ ಎಳೆದಾಡಿದ ದೃಶ್ಯವನ್ನು ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.

- Advertisement -

Latest News

error: Content is protected !!