Monday, April 29, 2024
Homeತಾಜಾ ಸುದ್ದಿಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಲ್ಲಿ ಜನಿಸಿದ ಆನೆ ಮರಿಗೆ ಸುಧಾಮೂರ್ತಿ ಹೆಸರು

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಲ್ಲಿ ಜನಿಸಿದ ಆನೆ ಮರಿಗೆ ಸುಧಾಮೂರ್ತಿ ಹೆಸರು

spot_img
- Advertisement -
- Advertisement -

ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಇನ್ಫೋಸಿಸ್ ನೀಡಿರುವ ಕೊಡುಗೆ ಸ್ಮರಿಸುತ್ತಾ ಮರಿ ಆನೆಯೊಂದಕ್ಕೆ ಸುಧಾ ಎಂದು ನಾಮಕರಣ ಮಾಡಲಾಗಿದೆ.

ಎಕ್ಸಿಕ್ಯೂಟಿವ್ ಡೈರೆಕ್ಟರ್ ವನಶ್ರೀ ವಿಪಿನ್ ಸಿಂಗ್ ಅವರು ಮಾತನಾಡಿ, ವನ್ಯ ಪ್ರಾಣಿಗಳ ಕುರಿತು ಸುಧಾಮೂರ್ತಿಯವರಿಗೆ ಪ್ರೀತಿ ಇದೆ. ಸುಧಾಮೂರ್ತಿಯವರು ಈ ಮನವಿಗೆ ಒಪ್ಪಿದ್ದಾರೆ ಎಂದರು. ಸುವರ್ಣ ಎಂಬ 45 ವರ್ಷದ ಆನೆ ಆಗಸ್ಟ್ 17 ರಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಇದರಿಂದ ಉದ್ಯಾನದಲ್ಲಿ ಆನೆಗಳ ಸಂತತಿ 25ಕ್ಕೆ ಏರಿದಂತಾಗಿದೆ.

ಇನ್ಫೋಸಿಸ್ ಪ್ರತಿಷ್ಠಾನವು ಜೈವಿಕ ಉದ್ಯಾನದಲ್ಲಿ ಹುಲಿ, ಝೀಬ್ರಾ, ಜಿರಾಫೆ ಇರುವ ಪ್ರದೇಶಗಳಲ್ಲಿ ಬೇಲಿಯ ವ್ಯವಸ್ಥೆ ಮಾಡಿದ್ದು, ಬೋರ್‌ವೆಲ್ ತೆಗೆಸಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಕೊಟ್ಟಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳು ಸೇರಿದಂತೆ ಹಲವರು ಸುಧಾ ಅವರ ಹೆಸರನ್ನು ಇಡುವಂತೆ ಸೂಚಿಸಿದ್ದರು.

ಉದ್ಯಾನದಲ್ಲಿ 101 ಬಗೆಯ ಸುಮಾರು 2300 ಪ್ರಾಣಿಗಳಿವೆ, ಒಟ್ಟು 731.88 ಎಕರೆ ವ್ಯಾಪ್ತಿಯನ್ನು ಒಳಗೊಂಡಿದೆ. ಚಿಟ್ಟೆ ಪಾರ್ಕ್ ಕೂಡ ಇದೆ, ಸಫಾರಿಗೂ ಅವಕಾಶವಿದೆ.

- Advertisement -
spot_img

Latest News

error: Content is protected !!