Saturday, April 27, 2024
Homeಕರಾವಳಿ'ಯಕ್ಷ ಛಂದೋಬ್ರಹ್ಮ' ಶಿಮಂತೂರು ನಾರಾಯಣ ಶೆಟ್ಟಿ ನಿಧನ

‘ಯಕ್ಷ ಛಂದೋಬ್ರಹ್ಮ’ ಶಿಮಂತೂರು ನಾರಾಯಣ ಶೆಟ್ಟಿ ನಿಧನ

spot_img
- Advertisement -
- Advertisement -

ಮೂಲ್ಕಿ: ‘ಯಕ್ಷ ಛಂದೋಂಬುಧಿ’ಯ ಗ್ರಂಥ ಕರ್ತ, ಯಕ್ಷಗಾನದ ಛಂದಸ್ಸಿನ ಬಗ್ಗೆ ಆಳವಾದ ಜ್ಞಾನ ಹೊಂದಿದ, ‘ಯಕ್ಷಗಾನ ನಾಗವರ್ಮ’ ಎಂದು ಖ್ಯಾತಿ ಹೊಂದಿರುವ, ನಿವೃತ್ತ ಶಿಕ್ಷಕ, ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತ ಹಾಗು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದ ಶಿಮಂತೂರು ನಾರಾಯಣ ಶೆಟ್ಟಿ (87) ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಎಳತ್ತುರು ದಿ. ಅಚ್ಚನ್ನ ಶೆಟ್ಟಿ ಹಾಗೂ ನಂದಳಿಕೆ ಕಮಲಾಕ್ಷಿ ದಂಪತಿಯ ಪುತ್ರರಾದ ಇವರು ಶಾಲಾ ಶಿಕ್ಷಕರಾಗಿ, ವಿದ್ವಾಂಸರಾಗಿ ಬರಹಗಾರರಾಗಿ, ಯಕ್ಷಗಾನ ಪ್ರಸಂಗ ಕರ್ತೃಗಳಾಗಿ ಪ್ರಸಿದ್ಧಿ ಪಡೆದಿದ್ದರು.

ಅವರ ‘ಯಕ್ಷಗಾನ ಛಂದೋಬುಧಿ’ ಕೃತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಗೌರವ ಡಾಕ್ಟರೆಟ್ ಪ್ರದಾನ ಮಾಡಿತ್ತು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾಗಿರುವ ಅವರು, ತಮ್ಮ 14ರ ಹರೆಯದಲ್ಲೇ ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗ ರಚಿಸಿದ್ದರು. ಯಕ್ಷಗಾನ ಸಾಹಿತ್ಯದಲ್ಲಿ ಛಂದಸ್ಸಿನ ಬಗ್ಗೆ ಅಪಾರ ಅಧ್ಯಯನ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದಿದ್ದರು.

ಐದನೇ ತರಗತಿಯಲ್ಲಿದ್ದಾಗಲೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿದ್ದರು. ಆರನೇ ತರಗತಿಯಿಂದ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿ ದರ್ಪಣ, ಹೇಮಚಂದ್ರಮ ಛಂದೋ ನುಶಾಸನಗಳನ್ನು ಅಧ್ಯಯನ ಮಾಡಿದ್ದರು.

ಶಿಮಂತೂರು ನಾರಾಯಣ ಶೆಟ್ಟಿಯವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಗಣೇಶ ಕೊಲೆಕಾಡಿ ಸೇರಿ ನೂರಾರು ಶಿಷ್ಯರನ್ನು ಕಲಾ ಕ್ಷೇತ್ರಕ್ಕೆ ನೀಡಿದ ಹಿರಿಮೆ ಶಿಮಂತೂರು ನಾರಾಯಣ ಶೆಟ್ಟಿಯವರದ್ದು. ಹಲವಾರು ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ವತಿಯಿಂದ ಸಂತಾಪ ಸೂಚಿಸಿದ್ದಾರೆ.

ಯಕ್ಷಭಾರತಿ ಸೇವಾನಿಕೇತನದಿಂದ ಸಂತಾಪ
ಇಂದು ನಿಧನರಾದ ಪ್ರಸಂಗ ಸಾಹಿತ್ಯ ರಚನಾಕಾರರು, ಛಂದಶಾಸ್ತ್ರ ಪ್ರವೀಣ, ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾlನಾರಾಯಣ ಶೆಟ್ಟಿ ಶಿಮಂತೂರು ಇವರ ಆತ್ಮಕ್ಕೆ ಚಿರ ಶಾಂತಿ ಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಕನ್ಯಾಡಿಯ ಯಕ್ಷಭಾರತಿ ಸೇವಾನಿಕೇತನದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!