Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ಮತ್ತೆ ದೋಣಿ ದುರಂತ: ದೋಣಿಯ ಎರಡು ಇಂಜಿನ್ ಸಮುದ್ರ ಪಾಲು

ಉಡುಪಿಯಲ್ಲಿ ಮತ್ತೆ ದೋಣಿ ದುರಂತ: ದೋಣಿಯ ಎರಡು ಇಂಜಿನ್ ಸಮುದ್ರ ಪಾಲು

- Advertisement -

ಉಡುಪಿಯಲ್ಲಿ ಮತ್ತೆ ದೋಣಿ ದುರಂತ !#Udupi

Posted by Maha Xpress on Wednesday, 26 August 2020
- Advertisement -

ಉಡುಪಿ: ಪದೇಪದೇ ಉಡುಪಿ ಜಿಲ್ಲೆಯಲ್ಲಿ ದೋಣಿ ದುರಂತ ಕಾಣಿಸಿಕೊಳ್ಳುತ್ತಿರುವುದು ಒಂದು ರೀತಿ ವಿಪರ್ಯಾಸವಾಗಿದೆ, ಶ್ರೀನಿವಾಸ ಕಾರ್ವಿ ಮಾಲೀಕತ್ವದ ಆದಿ ಆಂಜನೇಯ ದೋಣಿ ಮಗುಚಿದ ಪರಿಣಾಮ ದೋಣಿ ಮಾಲೀಕ ಶ್ರೀನಿವಾಸ್ ಖಾರ್ವಿ ಕಾಲಿಗೆ ಗಂಭೀರ ಗಾಯವಾಗಿದ್ದು ಕುಂದಾಪುರದ ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದಾರೆ.

ನಾಡದೋಣಿಯ ಎರಡು ಇಂಜಿನ್ ಸಮುದ್ರ ಪಾಲಾಗಿದೆ. ಹಾಗೂ ಇದು ಗಂಗೊಳ್ಳಿ ಬಂದರಿನ ಆದಿ ಆಂಜನೇಯ ದೋಣಿಯಾಗಿದ್ದು ನಾಲ್ಕು ಜನ ಮೀನುಗಾರರು ಮರವಂತೆಯಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದಾಗ ತೆರೆಯ ರಭಸಕ್ಕೆ ದಿಬ್ಬಕ್ಕೆ ಹೊಡೆದು ದೋಣಿ ಮಗುಚಿದ ಘಟನೆ ಇಂದು ತ್ರಾಸಿ ಮರವಂತೆಯಲ್ಲಿ ನಡೆದಿದೆ.

ಅದೃಷ್ಟವಶಾತ್ ಮೀನುಗಾರರು ಸಮುದ್ರದಲ್ಲಿ ಈಜಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ದೋಣಿ ಮಾಲೀಕನ ಕಾಲು ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಏಟಾಗಿದೆ. ಪದೇಪದೇ ಇಂತಹ ದುರ್ಘಟನೆಗಳು ನಡೆಯುತ್ತಿರುವುದರಿಂದ ಮತ್ತೆ ಮೀನುಗಾರರಲ್ಲಿ ಆತಂಕ ಮನೆಮಾಡಿದೆ.

- Advertisement -

Latest News

error: Content is protected !!