Sunday, June 16, 2024
Homeಇತರಅತಿಯಾದ ಬಿಕ್ಕಳಿಕೇನೂ ಕೊರೊನಾದ ಲಕ್ಷಣ ಅಂತಿದ್ದಾರೆ ವೈದ್ಯರು...

ಅತಿಯಾದ ಬಿಕ್ಕಳಿಕೇನೂ ಕೊರೊನಾದ ಲಕ್ಷಣ ಅಂತಿದ್ದಾರೆ ವೈದ್ಯರು…

spot_img
- Advertisement -
- Advertisement -

ಬೆಂಗಳೂರು : ಜ್ವರ ಇದ್ದರಷ್ಟೇ ಅಲ್ಲ ಇನ್ನು ಬಿಕ್ಕಳಿಕೆ ಬಂದರೂ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು! ನಗರದ ಜಯದೇವ ಹೃದಯ ವಿಜ್ಞಾನ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ಬಿಕ್ಕಳಿಕೆಯೂ ಒಂದು ಲಕ್ಷಣ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಕೇವಲ ಟೆಂಪರೇಚರ್ ಪರೀಕ್ಷೆಯಿಂದ ಪ್ರಯೋಜನವಿಲ್ಲ ಎನ್ನುತ್ತಾರೆ ವೈದ್ಯರು.

ಕೋವಿಡ್-19 ಸೋಂಕು ಹೊಂದಿರುವ ಸುಮಾರು 200 ರೋಗಿಗಳ ಮೇಲೆ ಸಂಸ್ಥೆ ಅಧ್ಯಯನ ನಡೆಸಿದೆ. ಈ ವೇಳೆ ಸೋಂಕಿತರಲ್ಲಿ ಕೇವಲ ಶೇ. 20-25 ಮಂದಿಗೆ ಮಾತ್ರವೇ ಜ್ವರ ಲಕ್ಷಣ ಕಂಡು ಬಂದಿದ್ದು, ಉಳಿದ ಶೇ. 75 ಮಂದಿಯಲ್ಲಿ ಬೇರೆ ಬೇರೆ ಲಕ್ಷಣಗಳು ಕಾಣಿಸಿಕೊಂಡಿರುವುದು ತಿಳಿದುಬಂದಿದೆ.
ಈಗಾಗಲೇ ಜ್ವರ, ಶೀತ ಸಂಬಂಧಿ ಸಮಸ್ಯೆ, ತೀವ್ರ ಉಸಿರಾಟದ ತೊಂದರೆಯಂತಹ ಲಕ್ಷಣಗಳನ್ನು ಹೊಂದಿರುವವರಿಗೆ ಮಾತ್ರವೇ ಕೋವಿಡ್-19 ತಪಾಸಣೆ ಮಾಡಲಾಗುತ್ತಿದೆ. ಆದರೆ ಸೋಂಕಿತರಲ್ಲಿ ತಲೆ ನೋವು, ಮೈ-ಕೈ ನೋವು, ರುಚಿ ಮತ್ತು ವಾಸನೆ ಇಲ್ಲದಿರುವುದು ಸೇರಿ ಹಲವು ಲಕ್ಷಣಗಳು ಕಂಡುಬಂದಿದೆ. ಈ ಮೇಲಿನ ಯಾವ ಲಕ್ಷಣಗಳೂ ಕಂಡು ಬರದಿದ್ದರೂ, ಸೋಂಕಿತರಲ್ಲಿ ಮೇಲಿಂದ ಮೇಲೆ ಬಿಕ್ಕಳಿಕೆ ಬರುತ್ತಿರುವುದು ಮತ್ತೊಂದು ಲಕ್ಷಣ ಎನ್ನಲಾಗಿದೆ.

ಆದರೆ ಬಿಕ್ಕಳಿಗೆ ಕೋವಿಡ್ ಲಕ್ಷಣ ಎಂದು ಎಲ್ಲಿಯೂ ನಮೂದಾಗಿಲ್ಲ. ಜ್ವರದೊಂದಿಗೆ ಬಿಕ್ಕಳಿಕೆಯೂ ಕಂಡು ಬಂದರೆ ಅದನ್ನು ಕೋವಿಡ್ ಎಂದು ಶಂಕಿಸಬಹುದಾಗಿದ್ದು,ಈ ನಿಟ್ಟಿನಲ್ಲಿ ಸೋಂಕಿತರ ಕುರಿತು ಇನ್ನಷ್ಟು ನಿಗಾ ವಹಿಸುವ ಅಗತ್ಯವಿದೆ ಎನ್ನುತ್ತಾರೆ ವೈದ್ಯರು.

ದೇಹದ ಉಷ್ಣಾಂಶವೇ ಮಾನದಂಡ: ವ್ಯಕ್ತಿಯ ದೇಹದ ಉಷ್ಣಾಂಶ ಆಧರಿಸಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಮಾಲ್​ಗಳು, ಅಪಾರ್ಟ್ ಮೆಂಟ್​ಗಳು, ಸರ್ಕಾರ ಹಾಗೂ ಖಾಸಗಿ ಕಚೇರಿಗಳು ಸೇರಿ ಎಲ್ಲ ರೀತಿಯ ಕೆಲಸದ ಸ್ಥಳಗಳು ಎಲ್ಲೆಡೆ ಆರಂಭದಿಂದಲೂ ಕೇವಲ ದೇಹದ ಉಷ್ಣಾಂಶವನ್ನು ಅವಲಂಬಿಸಿಯೇ ಕೋವಿಡ್ ಪರೀಕ್ಷೆಗೆ ಶಿಫಾರಸು ಮಾಡಲಾಗುತ್ತಿದೆ. ಇದರಿಂದಾಗಿ ಪೂರ್ಣ ಪ್ರಮಾಣದಲ್ಲಿ ಸೋಂಕು ಪತ್ತೆ ಸಾಧ್ಯವಾಗುತ್ತಿಲ್ಲ. ಯಾವುದೇ ಒಂದು ಆರೋಗ್ಯ ಸಮಸ್ಯೆಗೆ ಒಂದೇ ರೀತಿಯ ಲಕ್ಷಣಗಳಿರು ವುದಿಲ್ಲ. ಹಲವು ಬಗೆಯ ಲಕ್ಷಣಗಳಿರುತ್ತವೆ. ಹೀಗಾಗಿ ರೋಗ ಪತ್ತೆಗೆ ನಾನಾ ರೀತಿಯ ಪರೀಕ್ಷೆ ನಡೆಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

ಹೃದ್ರೋಗದ ಕಾರಣ ತಿಳಿಯಲು ಎಕ್ಸ್​ರೇ, ಇಸಿಜಿ ಸೇರಿ ಹಲವು ಬಗೆಯ ಪರೀಕ್ಷೆ ನಡೆಸಲಾಗುತ್ತದೆ. ಅದೇ ರೀತಿ ಕರೊನಾ ಸೋಂಕಿತರಲ್ಲೂ ಕೇವಲ ಜ್ವರ ಮಾತ್ರವಲ್ಲದೆ ಹಲವು ಲಕ್ಷಣಗಳಿರುವುದು ಈ ಅಧ್ಯಯನ ದಿಂದ ಕಂಡು ಬಂದಿದೆ. ಒಂದಿಬ್ಬರಲ್ಲಿ ಬಿಕ್ಕಳಿಕೆಯೂ ಕಂಡು ಬಂದಿದ್ದು, ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಬೇಕಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾದ  ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!