Thursday, June 4, 2026
Homeತಾಜಾ ಸುದ್ದಿರಮೇಶ್ ಜಾರಕಿಹೊಳಿ ಸಿಡಿ ದಿನೇಶ್ ಕಲ್ಲಹಳ್ಳಿಗೆ ಸಿಕ್ಕಿದೆಲ್ಲಿ ಗೊತ್ತಾ?

ರಮೇಶ್ ಜಾರಕಿಹೊಳಿ ಸಿಡಿ ದಿನೇಶ್ ಕಲ್ಲಹಳ್ಳಿಗೆ ಸಿಕ್ಕಿದೆಲ್ಲಿ ಗೊತ್ತಾ?

- Advertisement -
- Advertisement -

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಒಳಗೊಂಡಿದೆ ಎನ್ನಲಾದ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.

ಪ್ರಕರಣದ ಜಾಡು ಹಿಡಿದು ಹೊರಟಿದ್ದ ಸಿಸಿಬಿ, ಕಬ್ಬನ್ ಪಾರ್ಕ್ ಪೊಲೀಸರಿಗೆ ಸಾಮಾಜಿಕ ಕಾರ್ಯಕರ್ತ ದೂರುದಾರ ದಿನೇಶ್ ಕಲ್ಲಹಳ್ಳಿ ಅವರಿಗೆ ರಾಸಲೀಲೆ ಸಿಡಿ ಯಾವ ಸ್ಥಳದಿಂದ ಲಭ್ಯವಾಗಿತ್ತು ಎಂಬ ಮಾಹಿತಿ ಲಭಿಸಿದೆ.

ಸಿಡಿ ಬಿಡುಗಡೆಗೂ ಮುನ್ನ ಮಾ.1ರಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ರಾಮಕೃಷ್ಣ ಲಾಡ್ಜ್​ ನಲ್ಲಿ ದಿನೇಶ್ ಕಲ್ಲಹಳ್ಳಿ, ಸಂತ್ರಸ್ತೆ ಕುಟುಂಬದ ಸ್ನೇಹಿತನನ್ನು ಭೇಟಿ ಮಾಡಿದ್ದರು. ಆ ಸ್ಥಳದಲ್ಲೇ ವ್ಯಕ್ತಿ ಓರ್ವನಿಂದ ದಿನೇಶ್ ಸಿಡಿ ಪಡೆದಿದ್ದರಂತೆ.


ಬುಧವಾರ ಸಂಜೆ ರಾಮಕೃಷ್ಣ ಲಾಡ್ಜ್​ಗೆ ಪೊಲೀಸರು ಭೇಟಿ ನೀಡಿ, ಲಾಡ್ಜ್​ನಲ್ಲಿದ್ದ ಸಿಸಿ ಕ್ಯಾಮೆರಾ, ಡಿವಿಆರ್ ವಶಕ್ಕೆ ಪಡೆದಿದ್ದಾರೆ.ದಿನೇಶ್ ಕಲ್ಲಹಳ್ಳಿ ಭೇಟಿ ಮಾಡಿದ್ದ ವ್ಯಕ್ತಿ ಹಾಗೂ ಅವರಿಬ್ಬರು ಮಾತನಾಡುತ್ತಿರುವ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಿನೇಶ್​ ಕಲ್ಲಹಳ್ಳಿಗೆ ಸಿಡಿ ಪಡೆದುಕೊಂಡಿದ್ದ ದಿನದಂದು ಲಾಡ್ಜ್​ನಲ್ಲಿ ಕರ್ತವ್ಯದಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ದೃಶ್ಯಾವಳಿಗಳನ್ನು ಬೇರೆ ಯಾರಿಗೂ ನೀಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!