Thursday, June 4, 2026
Homeಕರಾವಳಿಸವಣಾಲು : ಎನ್ .ನಾರಾಯಣ ಶೆಟ್ಟಿ ನಿಧನ

ಸವಣಾಲು : ಎನ್ .ನಾರಾಯಣ ಶೆಟ್ಟಿ ನಿಧನ

- Advertisement -
- Advertisement -

ಬೆಳ್ತಂಗಡಿ : ತಾಲೂಕಿನ  ಸವಣಾಲು ಗ್ರಾಮದ ಬೊಳ್ಳೊಟ್ಟು ಗುತ್ತು ನಿವಾಸಿ ಯನ್.ನಾರಾಯಣ ಶೆಟ್ಟಿ(89.ವ)ರವರು ಅಲ್ಪಕಾಲದ ಅಸೌಖ್ಯದಿಂದ ಮಾ.1 ರಂದು  ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ಮೂಲತಃ ಬಂಟ್ವಾಳ ತಾಲೂಕು ನಾರ್ಯಗುತ್ತು ಮನೆತನದವರಾದ ಇವರು, ಮುಂಬೈಯಲ್ಲಿ ಉದ್ಯಮಿಯಾಗಿದ್ದು , ನಂತರ ಬಹಳ ವರ್ಷಗಳಿಂದ ಸವಣಾಲು ಬೊಳ್ಳೊಟ್ಟು ಗುತ್ತು ಮನೆಯಲ್ಲಿ ನೆಲೆಸಿದ್ದರು . ಊರಿನ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಇವರು , ಸವಣಾಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸ್ಥಾಪಕಾಧ್ಯಕ್ಷರಾಗಿ, ಸವಣಾಲು ಕೊಡಮಣಿತ್ತಾಯ ನೇಮೋತ್ಸವ ಸಮಿತಿಯ  ಸ್ಥಾಪಕಾಧ್ಯಕ್ಷರಾಗಿ , ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದು ಮಾರ್ಗದರ್ಶಕರಾಗಿದ್ದರು .

ಮೃತರು ಪತ್ನಿ ,ಮೂವರು  ಪುತ್ರರು, ಇಬ್ಬರು ಪುತ್ರಿಯರು  ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಶಾಸಕ ಕೆ ವಸಂತ ಬಂಗೇರ, ಶಾಸಕ ಹರೀಶ್ ಪೂಂಜ,ಎಂಇಐಎಲ್ ಅಧ್ಯಕ್ಷ  ಸಂತೋಷ್ ಕುಮಾರ್ ರೈ ಬೋಳಿಯಾರು, ಶಿರ್ಲಾಲು ಸಹಕಾರಿ ಸಂಘದ ಅಧ್ಯಕ್ಷ ನವೀನ್ ಸಾಮಾನಿ, ತಾಲೂಕು ಬಂಟರ ಸಂಘದ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಬಿಜೆಪಿ ಮುಖಂಡ ಬಾಲಕೃಷ್ಣ ವಿ  ಶೆಟ್ಟಿ ಸಾಲಿಗ್ರಾಮ  ಮೊದಲಾದ ಗಣ್ಯರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ, ಸಂತಾಪ ಸೂಚಿಸಿದರು.

- Advertisement -

Latest News

error: Content is protected !!