Thursday, May 2, 2024
Homeತಾಜಾ ಸುದ್ದಿಭಾರತ-ಇಂಗ್ಲೆಂಡ್ 4ನೇ ಟೆಸ್ಟ್: ಮೊದಲ ದಿನದಲ್ಲಿ ಇಂಗ್ಲೆಂಡ್ 205 ರನ್ ಗೆ ಆಲೌಟ್, ಭಾರತ 24/1

ಭಾರತ-ಇಂಗ್ಲೆಂಡ್ 4ನೇ ಟೆಸ್ಟ್: ಮೊದಲ ದಿನದಲ್ಲಿ ಇಂಗ್ಲೆಂಡ್ 205 ರನ್ ಗೆ ಆಲೌಟ್, ಭಾರತ 24/1

spot_img
- Advertisement -
- Advertisement -

ಅಹಮದಾಬಾದ್: ಮೋಟೆರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ 205 ಕ್ಕೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದೆ.

ಆರಂಭದಿಂದಲೇ ಭಾರತದ ಬೌಲರ್ ಗಳ ಎದುರು ಇಂಗ್ಲೆಂಡ್ ಬ್ಯಾಟ್ಸಮನ್ ಗಳು ಪರದಾಡಿದರು.ತಂಡದ ಮೊತ್ತ 30 ಆಗುವಷ್ಟರಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ ತಂಡವು ನಂತರದಲ್ಲಿ ಚೇತರಿಸಿಕೊಂಡರೂ ಸಹಿತ ಭಾರತದ ಬೌಲರ್ ಗಳು ಸ್ಟೋಕ್ಸ್,(55) ಡೆನಿಯಲ್ ಲಾರೆನ್ಸ್ ರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಇಂಗ್ಲೆಂಡ್ ಪರ ಜಾನಿ ಬೇರ್ಸ್ಟೋವ್ 28, ಬೆನ್ ಸ್ಟೋಕ್ಸ್ 55, ಒಲಿ ಪೊಪೆ 29, ಡಾನ್ ಲಾರೆನ್ಸ್ 46 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಅಕ್ಷರ್ ಪಟೇಲ್ 4, ಅಶ್ವಿನ್ 3, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದಿದ್ದಾರೆ.

ನಂತರ ಮೊದಲನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ಒಂದು ವಿಕೆಟ್ ಕಳೆದುಕೊಂಡು 24 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸಮನ್ ಶುಭ್ಮನ್ ಗಿಲ್ ಶೂನ್ಯಕ್ಕೆ ಔಟ್ ಆಗಿದ್ದು, ರೋಹಿತ್ ಶರ್ಮಾ ಹಾಗೂ ಚೆತೆಶ್ವರ್ ಪೂಜಾರ್ ಕ್ರಮವಾಗಿ 8 ಹಾಗೂ 15 ರನ್ ಗಳಿಸಿ ಕ್ರಿಸ್ ನಲ್ಲಿ ಆಡುತ್ತಿದ್ದಾರೆ. ಇಂಗ್ಲೆಂಡ್ ಮತ್ತು ಭಾರತ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

ಸಂಕ್ಷಿಪ್ತ ಸ್ಖೋರ್:
ಇಂಗ್ಲೆಂಡ್ (ಮೊದಲ ಇನ್ನಿಂಗ್ಸ್) 205
( ಬೆನ್ ಸ್ಟೋಕ್ಸ್ 55, ಡೇನಿಯಲ್ ಲಾರೆನ್ಸ್ 46 ಓಲ್ಲೀ ಪೋಪ್ 29, ಜಾನಿ ಬೇರ್​ ಸ್ಟೋ 28, ಅಕ್ಷರ್ ಪಟೇಲ್ 4|68, ರವಿಚಂದ್ರನ್ ಅಶ್ವಿನ್ 3/47, ಮೊಹಮ್ಮದ್ ಸಿರಾಜ್ 2/45)

ಭಾರತ (ಮೊದಲ ಇನ್ನಿಂಗ್ಸ್) 24/1
(ರೋಹಿತ್ ಶರ್ಮ ಬ್ಯಾಟಿಂಗ್ 8, ಚೇತೇಶ್ವರ್​ ಪೂಜಾರಾ ಬ್ಯಾಟಿಂಗ್ 15, ಜಿಮ್ಮಿ ಆಂಡರ್ಸನ್ 0/1)

- Advertisement -
spot_img

Latest News

error: Content is protected !!