Saturday, August 29, 2026
Homeತಾಜಾ ಸುದ್ದಿಮಂಡ್ಯದ ಐದು ರೂಪಾಯಿ ಡಾಕ್ಟರ್ ಶಂಕರೇಗೌಡರಿಗೆ ಹೃದಯಾಘಾತ

ಮಂಡ್ಯದ ಐದು ರೂಪಾಯಿ ಡಾಕ್ಟರ್ ಶಂಕರೇಗೌಡರಿಗೆ ಹೃದಯಾಘಾತ

- Advertisement -
- Advertisement -

ಮಂಡ್ಯ : ಕೇವಲ ಐದು ರೂಪಾಯಿಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮಂಡ್ಯದ ಐದು ರೂಪಾಯಿ ಡಾಕ್ಟರ್ ಶಂಕರೇಗೌಡರಿಗೆ ಲಘು ಹೃದಯಾಘಾತವಾಗಿದೆ,

ಮಂಡ್ಯದ ಬಂದಿ ಸಿದ್ದೇಗೌಡ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ನಿನ್ನೆ ತಡರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗ ಹೃದಯಾಘಾತವಾಗಿರೋದು ಗೊತ್ತಾಗಿದೆ. ಕೂಡಲೇ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ವೈದ್ಯ ಶಂಕರೇಗೌಡರಿಗೆ ಚಿಕಿತ್ಸೆ ನೀಡಲಾಗಿದೆ.ಶಂಕರೇಗೌಡರಿಗೆ ಆಂಜಿಯೋಗ್ರಾಂ ಮಾಡಿದ್ದಾರೆ ವೈದ್ಯರು. ಸದ್ಯ ಶಂಕರೇಗೌಡ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಹೃದಯದ ಮೂರು ರಕ್ತನಾಳಗಳು ಬ್ಲಾಕ್ ಆದ ಕಾರಣ ಹೃದಯಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದು, ಒಂದು ವಾರದ ಚಿಕಿತ್ಸೆ ಬಳಿಕ ಬೈ ಪಾಸ್ ಸರ್ಜರಿ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.

- Advertisement -

Latest News

error: Content is protected !!