Sunday, May 12, 2024
Homeತಾಜಾ ಸುದ್ದಿದಕ್ಷಿಣ ಕನ್ನಡದಲ್ಲಿ ಶೀಘ್ರವೇ ಆರಂಭವಾಗಲಿದೆ ಕತ್ತೆ ಹಾಲು ಮಾರಾಟ ಡೈರಿ: ನೂತನ ಪ್ರಯೋಗಕ್ಕೆ ಸಾಕ್ಷಿಯಾಗಲಿದೆ ಬಂಟ್ವಾಳದ...

ದಕ್ಷಿಣ ಕನ್ನಡದಲ್ಲಿ ಶೀಘ್ರವೇ ಆರಂಭವಾಗಲಿದೆ ಕತ್ತೆ ಹಾಲು ಮಾರಾಟ ಡೈರಿ: ನೂತನ ಪ್ರಯೋಗಕ್ಕೆ ಸಾಕ್ಷಿಯಾಗಲಿದೆ ಬಂಟ್ವಾಳದ ಮಂಚಿ ಗ್ರಾಮ

spot_img
- Advertisement -
- Advertisement -

ದಕ್ಷಿಣ ಕನ್ನಡ: ಕರ್ನಾಟಕದ ಮೊತ್ತ ಮೊದಲ ಹಾಗೂ ದೇಶದಲ್ಲೇ ವಿನೂತನವಾದ ಕತ್ತೆ ಹಾಲು ಮಾರಾಟ ಮಾಡುವ ಡೈರಿ ಫಾರ್ಮೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ. ಆ ಮೂಲಕ, ರಾಜ್ಯದ ರೈತರಿಗೆ ಇನ್ನು ಮುಂದೆ ಕತ್ತೆಗಳ ಸಾಕಣೆ ಹಾಗೂ ಹಾಲು ಉತ್ಪಾದನೆಯನ್ನು ಒಂದು ವಿಶಿಷ್ಟ ಹೈನು ಉದ್ಯಮವಾಗಿ ಪ್ರಾರಂಭಿಸುವ ಅವಕಾಶ ಲಭಿಸಲಿದೆ. ಶ್ರೇಷ್ಠ ಪೌಷ್ಟಿಕಾಂಶಗಳನ್ನು ಹೊಂದಿರುವ ಕತ್ತೆ ಹಾಲಿಗೆ ಕೊರೊನಾ ಸಾಂಕ್ರಾಮಿಕ ರೋಗ ಬಂದ ಅನಂತರ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಭಾರತದಲ್ಲೇ ಸದ್ಯಕ್ಕೆ ಒಂದು ಲೀಟರ್ ಕತ್ತೆ ಹಾಲಿಗೆ ಮಾರುಕಟ್ಟೆಯಲ್ಲಿ 5ರಿಂದ 10 ಸಾವಿರ ರೂ. ಇದೆ. ವಿದೇಶದಲ್ಲಿಯೂ ಒಂದು ಲೀಟರ್ ಕತ್ತೆ ಹಾಲು ಬರೋಬ್ಬರಿ 12 ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ. ಕತ್ತೆ ಹಾಲಿಗೆ ಬೇಡಿಕೆಯ ಜೊತೆಗೆ ಚಿನ್ನದಂಥ ಬೆಲೆ ಬಂದಿರುವುದು ಹಾಗೂ ಪ್ರಾಣಿಗಳ ಹಾಲಿನ ಪೈಕಿ ಕತ್ತೆ ಹಾಲು ಸೌಂದರ್ಯ ವರ್ಧಕ ಹಾಗೂ ಅತ್ಯಧಿಕ ಪ್ರೋಟೀನ್ ಅಂಶ ಒಳಗೊಂಡಿರುವುದು ನಾನಾ ಸಂಶೋಧನೆಗಳಿಂದ ದೃಢವಾಗುತ್ತಿದ್ದಂತೆ ಕತ್ತೆ ಸಾಕಣೆಯನ್ನೇ ಹೈನುಗಾರಿಕೆ ರೀತಿ ಉದ್ಯಮವಾಗಿ ಬೆಳೆಸುವುದಕ್ಕೆ ವಿಪುಲ ಅವಕಾಶಗಳು ತೆರೆದುಕೊಳ್ಳುತ್ತಿದೆ.

ಭವಿಷ್ಯದಲ್ಲಿ ಕತ್ತೆ ಹಾಲಿನ ಬೇಡಿಕೆ ಗಮನದಲ್ಲಿಟ್ಟುಕೊಂಡು ಚೊಚ್ಚಲ ಕತ್ತೆ ಹಾಲು ವಹಿವಾಟಿನ ಡೈರಿ ಸ್ಥಾಪನೆ ಪ್ರಯೋಗಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಲಿದೆ. ಕೃಷಿ ಚಟುವಟಿಕೆಗಳಿಗೂ ಕತ್ತೆ ಗೊಬ್ಬರ ಹೆಚ್ಚು ಪರಿಣಾಮಕಾರಿಯಾಗಿರುವ ಕಾರಣ ಒಂದು ಕೆ.ಜಿ. ಗೊಬ್ಬರಕ್ಕೂ 600ರಿಂದ 700 ರೂ. ಇದೆ. ಹಾಲು ಮತ್ತು ಗೊಬ್ಬರ ಲಾಭದ ಲೆಕ್ಕಾಚಾರದಲ್ಲಿ ಕತ್ತೆ ಸಾಕಣೆಯತ್ತ ರೈತರನ್ನು ಪ್ರೋತ್ಸಾಹಿಸುವ ಜೊತೆಗೆ ಸೂಕ್ತ ತರಬೇತಿ ಕೂಡ ನೀಡಲಾಗುವುದು. ಕತ್ತೆ ಸಾಕುವ ರೈತರು ತಿಂಗಳಿಗೆ 30ರಿಂದ 40 ಸಾವಿರ ರೂ. ಸಂಪಾದನೆ ಮಾಡಬಹುದು. ರೈತರು ಸಾಕುವ ಕತ್ತೆ ಹಾಲು-ಗೊಬ್ಬರ ಖರೀದಿಗೂ ಅವಕಾಶ ಕಲ್ಪಿಸುವುದು ಈ ಡೈರಿ ಫಾರ್ಮ್ ಸ್ಥಾಪನೆ ಮೂಲ ಉದ್ದೇಶವಾಗಿದೆ.

ಪ್ರಸ್ತುತ ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಅಬಿಬೇಬಿ ಅವರು 3 ವರ್ಷಗಳ ಹಿಂದೆ ಕತ್ತೆ ಹಾಲಿನ ಉಪ ಉತ್ಪನ್ನಗಳ ಡೈರಿ ಪ್ರಾರಂಭಿಸಿ ಯಶಸ್ಸು ಸಾಧಿಸಿದ್ದಾರೆ. ತಮಿಳುನಾಡಿನಲ್ಲಿಯೂ ಕೆಲವು ಕಡೆ ಕತ್ತೆ ಹಾಲನ್ನು ಸೌಂದರ್ಯ ವರ್ಧಕದಲ್ಲಿ ಬಳಸುವುದಕ್ಕೆ ಮಾರಾಟ ಮಾಡಲಾಗುತ್ತಿದೆ. ಇದೀಗ ಶ್ರೀನಿವಾಸ ಗೌಡ ಎಂಬುವವರು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಕತ್ತೆ ಹಾಲಿನ ಡೈರಿ ಪ್ರಾರಂಭಿಸುವುದಕ್ಕೆ ತೀರ್ಮಾನಿಸಿದ್ದಾರೆ.

- Advertisement -
spot_img

Latest News

error: Content is protected !!