Wednesday, September 2, 2026
Homeತಾಜಾ ಸುದ್ದಿ11 ತಿಂಗಳ ಕಂದನಿಗೆ ಇಡೀ ವಿಶ್ವದ ದೊಡ್ಡ ಕಾಯಿಲೆ: ಕಂದಮ್ಮ ಬದುಕುಳಿಯಲು ಬೇಕಿದೆ 16...

11 ತಿಂಗಳ ಕಂದನಿಗೆ ಇಡೀ ವಿಶ್ವದ ದೊಡ್ಡ ಕಾಯಿಲೆ: ಕಂದಮ್ಮ ಬದುಕುಳಿಯಲು ಬೇಕಿದೆ 16 ಕೋಟಿ ರೂ. ಇಂಜೆಕ್ಷನ್

- Advertisement -
- Advertisement -

ಬೆಂಗಳೂರು: ಕೆಲವೊಮ್ಮೆ ದೇವರು ಎಷ್ಟು ನಿಷ್ಕರುಣಿ ಅನ್ನಿಸಿ ಬಿಡುತ್ತೆ.  ಅದಕ್ಕೆ ಸರಿಯಾದ ಉದಾಹರಣೆ ಈ ಪ್ರಕರಣ ಅನ್ಸುತ್ತೆ. ಬೆಂಗಳೂರಿನ 11 ತಿಂಗಳ ಮುದ್ದಾದ ಕಂದಮ್ಮವೊಂದು ದೊಡ್ಡ ಸಮಸ್ಯೆಯಿಂದ ಬಳಲುತ್ತಿದೆ. ಈ ಮಗು ಬದುಕಬೇಕಾದರೆ 16 ಕೋಟಿಯ ಇಂಜೆಕ್ಷನ್ ಬೇಕೇ ಬೇಕು.. ಆದ್ರೆ ಅಷ್ಟೊಂದು ದುಡ್ಡು ಹೊಂದಿಸಲಾಗದೇ ಮಗುವಿನ ಹೆತ್ತವರು ಇದೀಗ ಕಣ್ಣೀರಲ್ಲಿ ಕೈತೊಳುತ್ತಿದ್ದಾರೆ.

ಹೌದು….ಬೆಂಗಳೂರಿನ  ಸಂಜೀವಿನಿ ನಗರದ ನಿವಾಸಿಗಳಾಗಿರುವ ನವೀನ್​ಕುಮಾರ್-ಜ್ಯೋತಿ ದಂಪತಿ ಪುತ್ರ 11 ತಿಂಗಳ ಕಂದ ಜನೀಶ್ ವಿಶ್ವವೇ ಬೆಚ್ಚಿ ಬೀಳಿಸೋ ಕಾಯಿಲೆಗೆ ತುತ್ತಾಗಿದ್ದಾನೆ. ಮಗುವಿನ ಕುಟುಂಬದ ಪರಿಸ್ಥಿತಿಯೂ ಅಷ್ಟೇನು ಚೆನ್ನಾಗಿಲ್ಲ. ಇದರ ಮಧ್ಯೆ ಮಗುವಿಗೆ ಜೀನ್ ಸಮಸ್ಯೆ ಕಾಣಿಸಿಕೊಂಡಿದೆ. ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಸಮಸ್ಯೆ ಅಂದ್ರೆ, ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಅಂತಾ. ವೈದ್ಯಲೋಕದಲ್ಲೇ ಇದು ಅಪರೂಪದ ಸಮಸ್ಯೆ.

ಈಗ ಜನೀಶ್ ಉಳಿಯಬೇಕಾದ್ರೆ ಬರೋಬ್ಬರಿ 16 ಕೋಟಿಯ ಮೆಡಿಸಿನ್ ಬೇಕಾಗಿದೆ. ಅದೂ ಅಮೆರಿಕದಲ್ಲಿ ಸಿಗುವ ಔಷಧಿಯೇ ಬೇಕು. ಇಷ್ಟೊಂದು ದುಡ್ಡು ಎಲ್ಲಿಂದ ತರೋದು ಅಂತಾ ತಂದೆ ನವೀನ್​ಕುಮಾರ್ ಕಣ್ಣೀರಿಡ್ತಿದ್ದಾರೆ.

- Advertisement -

Latest News

error: Content is protected !!